ಪುಟ:Abhaya.pdf/೨೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೭೮ ಅಭಯ

ಟ್ರ ಯೋಜನೆಯಲ್ಲಿ ತುಂಗಮ್ಮನೆ ಭಾಷಣ ಕೇಳುವುದನ್ನೈ ಸರಸಮ್ಮ ಮರೆತು ಬಿಟ್ಟಿದ್ದರು. ನಿದ್ದೆಯಿಂದ ಎಚ್ಚತ್ತವರಂತೆ ಅವರು ತುಂಗಮ್ಮ, ಓದುತಿದ್ದುದಕ್ಕೆ ಕಿವಿಗೊಟ್ಟರು

ಈ ವರ್ಷ, ನಮ್ಮ ಸೋದರಿಯರಲ್ಲಿ ಒಬ್ಬಳಾದ ಕನಕಲಕ್ಷಮ್ಮನಿಗೆ ಮದುವೆಯಾಯಿತೆಂದು ತಿಳಿಸಲು ಸೆಂತೋಷಿಸುತ್ತೇವೆ"

ಕುಳಿತಿದ್ದ ಹುಡುಗಿಯರ ತುಟಿಗಳೆಲ್ಲ ಬಿಮ್ಮನೆ ಬಿಗಿದಿದ್ದರೂ ಕಣ್ಣು ಗಳು ನಕ್ಚುವು. ಸರಸಮ್ಮನ ಉಸಿರು ಒಂದು ಕ್ಷಣ ತಡೆದು ನಿಂತಿತು. ಕನಕಲಕ್ಷಮ್ಮನಿಗೆ ಮುಂದೇನಾಯಿತೆಂಬುದನ್ನು ಅವರು ಆ ಭಾಷಣದಲ್ಲಿ ತಿಳಿಸಿರಲಿಲ್ಲ. ಮೇಯರ್‌ ಮತ್ತೊಮ್ಮೆ ಪಕ್ಕಕ್ಕೆ ಹೊರಳಿದರೆ ಕನಕ ಲಕ್ಷಮ್ಮನ ವಿಷಯ ಅವರಿಗೆ ತಿಳಿದಿದೆಯೇನೋ ಎಂದು ಗಾಬರಿಯಾದರು ಸರಸಮ್ಮ. ಆದರೆ ಮೇಯರ್‌ ಹೇಳಿದುದು ಬೇರೆಯೇ:

"ವರದಿವಾಚನ ಸ್ವಾಗತಭಾಷಣ ಎರಡನ್ನೂ ಒಂದರಲ್ಲೇ ಸೇರಿಸ್ಟಿಟ್ಟದ್ದೀರಿ. ಒಳ್ಳೇದೇ ಆಯ್ತು !

"ಬದುಕಿದೆ !---' ಎಂದು ಕೊಂಡರು ಸರಸನ್ಮು.

ಸ್ವಾಗತಭಾಷಣ ನಡೆದೇ ಇತ್ತು

ಕೊಡುವ ಸಹಾಯಧನವನ್ನು ಹೆಚ್ಚಿ ಸಬೇಕೆಂದು ಆಡಳಿತ ಸಮಿತಿ ಯವರು ಈ ವರ್ಷವೂ ಸರಕಾರಕ್ಕೆ ಮನವಿಮಾಡಿದ್ದಾರೆ ಮಾನ್ಯಸಚಿವರು ಈ ಸಾರೆಯೂ ಮನವಿಯನ್ನು ಪರಿಶೀಲಿಸುವುದಾಗಿ ಆಶ್ವಾಸನೆ ಕೊಟ್ಟಿದ್ದಾರೆ...”

ಆ ಯುವಕ ಕಿಸಕ್ಕನೆ ನಕ್ಕ ತುಂಗಮ್ಮ ಅರೆಕ್ಷಣ ಭಾಷಣನಿಲ್ಲಿಸಿ ಕಕ್ಕಾವಿಕ್ಕಿಯಾಗಿ ನೋಡಿದಳು. ಮೇಯರರೂ ಸಣ್ಣನೆ ನಕ್ಕರು. ತಾವು ಬರೆದುದರಲ್ಲೆನೋ ಅಚಾತುರ್ಯವಾಗಿರಬೇಕೆಂದು ಸರಸಮೃ ಯೋಚನೆಗೆ ಒಳಗಾದರು. ....ಈ ವರ್ಷವೂ ಮಾಡಿರುವ ಮನವಿ...ಈ ಸಾರೆಯೂ ದೊರೆತ ಆಶ್ವಾಸನೆ...ಓ! ಅದೊಂದು ರೀತಿಯ ವ್ಯಂಗ್ಯ. ಆತಪ್ಪನ್ನು ತಮಗರಿಯದೆಯೇ! ಸರಸಮ್ಮ ಮಾಡಿದ್ದರು...ಈಗ ಎಂತಹ ಪ್ರಮಾದ! ಆದರೆ ತುಂಗಮ್ಮ ಮುಂದಿನದನ್ನು ಅವಸರ ಅವಸರವಾಗಿಯೇ ಓದಿದಳು.