ಪುಟ:Abhaya.pdf/೨೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ

೨೭೯

"ವೌರಸಭೆಯವರು ಕೊಡುತ್ತಿರುವ ಅಲ್ಪ ಸಹಾಯವನ್ನೂ ಹೆಚ್ಚಿಸ
ಬೇಕೆಂದು ಕೇಳಿಕೊಳ್ಳಲಾಗಿದೆ ಈದಿನ ವೌರಸಭಾಧ್ಯಸಕ್ಷರೇ ನಮ್ಮ ವಾರ್ಷಿ
ಕೋತ್ಸವದ ಅಧ್ಯಕ್ಷತೆಯನ್ನು ವಹಿಸಲು ಒಪ್ಪಿಕೊಂಡಿರುವುದು ನಮ್ಮ
ಭಾಗ್ಯವೇ ಸರಿ.ಮತ್ತೋಮ್ಮೆ ನಾವು ತಮಗೆಲ್ಲಾ ಹೃತ್ಪೂರ್ವಕ ಸ್ವಾಗತ
ಬಯಸುತ್ತೇವೆ"
ತುಂಗಮ್ಮ ಭಾಷಣ ಮುಗಿಸಿ ಕೈ ಜೋಡಿಸಿ ಬಾಗಿ,ಎಲ್ಲರಿಗೂ
ಎಂಬಂತೆ,ವಂದಿಸಿದಳು.ಆಕೆಯ ಕಂಕುಳುಗಳೆರಡೂ ಬೆವತು ರವಕೆ
ಒದ್ದೆಯಾಗಿತ್ತು ಒಂದು ಹನಿ ಬೆವರು ಕತ್ತಿನ ಕೆಳಗಿಂದ ಹೊರಟು ಎದೆಯ
ನಡುವಿನಿಂದಲೂ ಇನ್ನೊಂದು ಬೆನ್ನು ಹುರಿಯ ಮೇಲಿಂದಲೂ ಆಮೆಯ
ನಡಿಗೆಯಿಂದ ಕೆಳಕ್ಕಿಳಿದುವು.
ಕರತಾಡನವಾಯಿತು ತುಂಗಮ್ಮನ ಮುಖ ಕೆಂಪೇರಿತು.ಆಕೆ
ಹಿಂಭಾಗಕ್ಕೆ ಬಂದು ಸರಸಮ್ಮನ ಪಕ್ಕದಲ್ಲಿ ನಿಂತಳು.
ಆ ಬಳಿಕ ಕಾರ್ಯದರ್ಶಿನಿ ಕಮಲಮ್ಮನ ಭಾಷಣ.
ಆದಾದಮೇಲೆ ಹಿತ ಚಿಂತಕರು....
ಅಧ್ಯಾಕ್ಷತೆ ವಹಿಸಿದ್ದ ಮೇಯರ್,ತಮ್ಮ ಪಕ್ಕದಲ್ಲಿದ್ದ ಯುವಕನನ್ನು
ಉದ್ದೇಶಿಸಿ ಕೇಳಿದರು:
"ನೀವು ಮಾತಾಡ್ತಿರಾ ಮಿ.ಸೋಮಶೇಖರ್?"
"ಬೇಡೀಪ್ಪಾ ಜಾಸ್ತಿ ಹಿಂಸೆ ಕೊಡಬಾರದು ಹುಡುಗೀರಿಗೆ."
ಸುಂದರಮ್ಮ ಅನಂತರಾಮಯ್ಯ ಇಳಿಧ್ವನಿಯಲ್ಲಿ ಅಂದರು:
"ಮಾತಾಡೋ ಸೋಮೂ."
"ಬೇಡ ಅಕ್ಕಾ."
ಅಕ್ಕ-ಹಾಗಾದರೆ ಈ ಯುವಕ ಸುಂದರಮ್ಮನ ಸಣ್ಣತಮ್ಮನಿರಬೇಕು
ಎಂದು ಎಣಿಕೆ ಹಾಕಿದರು ಸರಸಮ್ಮ.
ಬಹುಮಾನಗಳ ವಿನಿಯೋಗವಾಯಿತು ಮೇಯರರ ಪುಟ್ಟ ಭಾಷಣ
ವಾಯಿತು.
ನೆರೆದಿದ್ದ ಎಲ್ಲರಿಗೂ ಸರಸಮ್ಮ ಮನಃ ಪೂರ್ವಕವಾಗಿ ವಂದನಾರ್ಪಣೆ
ಮಾಡಿದರು.