ಪುಟ:Abhaya.pdf/೨೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮೦

ಅಭಯ

ಪಾರ್ವತಿ ಜನಗಣಮನ ಹಾಡಿದಳು.
ಬಂದವರನ್ನು ಬೀಳ್ಕೊಡಲು ಸರಸಮ್ಮ, ತುಂಗಮ್ಮ, ಜಲಜ ಲಲಿತ,
ಸಾವಿತ್ರಿಯರು ಬಾಗಿಲಹೊರಗೆ ಬಂದು ನಿಂತಂತೆ ಕಾರುಗಳು ಒಂದೊಂದಾಗಿ
ಹೊರಟವು. ಕೊನೆಯದಾಗಿ ಉಳಿದ ಪುಟ್ಟ ಕಾರನ್ನು ಏರುವುದಕ್ಕೆ ಮುಂಚೆ
ಆ ಯುವಕ - ಸೋಮಶೇಖರ್ - ಸರಸಮ್ಮನ ಬಳಿಗೆ ಬಂದ
"ಅಮ್ಮ, ಈ ಅಭಯಧಾಮದ ಕೆಲಸಕಾರ್‍ಯಾಗಳ ಸ್ವರೂಪ ಪರಚಯ
ನನಗಿಲ್ಲ. ನಮ್ಮಕ್ಕ ಒತ್ತಾಯಿಸಿ ಕರಕೊಂಡು ಒಂದ್ರು ಅಂತೂ
ಈ ದಿವಸದ ಸಾಯಂಕಾಲ ನನ್ನ ವಾಲಿನ ಒಂದು ಅಪೂರ್ವ ಅನುಭವ
ವಾಗಿದೆ. ಸಮಾರಂಭಕ್ಕಾಗಿ-ಅದಕ್ಕಿಂತಲೂ ಹೆಚ್ಚು ನೀವು ಪಡುತ್ತಿರೋ
ಶ್ರಮಕ್ಕಾಗಿ ಧನ್ಯವಾದಗಳು”
ಅದೊಂದೂ ನಟನೆಯ ಕವಟದ ಮಾತಾಗಿರಲಿಲ್ಲ. ತಮ್ಮ ದುಡಿಮೆ
ಸಾರ್ಥಕವಾಯಿತೆಂದು ಸರಸಮ್ಮನಿಗೆ ಅನಿಸಿತು.
ಆ ಯುವಕನೊ-ಸರಸಮ್ಮನಿಂದ ಸರಕ್ಕನೆ ತುಂಗಮ್ಮನತ್ತ ತಿರುಗಿದ :
"ನಿಮ್ಮ ಸ್ವಾಗತ ಭಾಷಣ ಚೆನ್ನಾಗಿತ್ತು, ಧನ್ಯವಾದಗಳು !”
ಅನಿರೀಕ್ಷಿತವಾಗಿದ್ದ ಮಾತುಕೇಳಿ ತುಂಗಮ್ಮನ ಗಂಟಲಿನಿಂದ ಸ್ವರ
ಹೊರಡಲೇ ಇಲ್ಲ. ಮುಖಮಾತ್ರ ಕಿವಿಗಳವರೆಗೂ ಕೆಂಪೇರಿತು. ಅಷ್ಟು
ಹೇಳಿ ಸೋಮಶೇಖ‌ರ್, ಉಳಿದ ಹುಡುಗಿಯರನ್ನೊಮ್ಮೆ ನೋಡಿ, ತನ್ನ
ಅಕ್ಕ ಕುಳಿತಿದ್ದ ಕಾರಿನತ್ತ ಗಂಭೀರವಾದ-ಆದರೂ ಹಗುರವಾದ ಹೆಜ್ಜೆ
ಗಳನ್ನಿಡುತ್ತ ಸಾಗಿದ.
ಸರಸಮ್ಮನಿಗೆ ಆಶ್ಚರ್ಯವಾಯಿತು ತುಂಗಮ್ಮನನ್ನೊಮ್ಮೆ ಅವರು
ನೋಡಿದರು. ಹಾಗೆ ನೋಡಿದಾಗ ಮೂಡಿದ ಮುಗುಳುನಗು ಹಾಗೆಯೇ
ಬಹಳ ಹೊತ್ತು ಅಲ್ಲಿ ನಿಂತಿತು.
ಆ ಕಾರು ಹೊರಟಾಗ ಸರಸಮ್ಮ, ಸುಂದರಮ್ಮ ಅನಂತರಾಮಯ್ಯ
ನಿಗೆ ವಂದಿಸಿದಳು. ಎಡಗೈಯಿಂದ ತನ್ನ ಕ್ರಾಪು ತೀಡಿಕೊಳ್ಳುತ್ತ ನುಗುತ್ತ
ಲಿದ್ದ ಸೋಮಶೇಖರನೂ ಅಕ್ಕನ ಜತೆಯಲ್ಲಿ ಮರುವಂದನೆಮಾಡಿದ.
ಬಂದಿದ್ದ ವರೆಲ್ಲ ಹೊರಟುಹೋದಮೇಲೂ ಸರಸಮ್ಮ ಆ ಹುಡುಗಿಯ
ರೊಡನೆ ಐದು ನಿಮಿಷಗಳ ಕಾಲ ಹೊರಗೇ ನಿಂತರು.