ಪುಟ:Abhaya.pdf/೨೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೨೮೨

ಅಭಯ

ಅಷ್ಟರಲ್ಲಿ ಹುಡುಗಿಯೊಬ್ಬಳು ಜಿಲೇಬಿ ಬಡಿಸುತ್ತ ಬಂದಳು. ಆಗ
ಜಲಜೆಗೆ ತುಂಗಮ್ಮನೆಂದಳು :
"ನಿನ್ನ ಬಾಯಿ ತೆರೆ ಜಲಜ ಜಿಲೇಬಿ ತುರುಕ್ತೀನಿ ಅದರೊಳಕ್ಕೆ.
ಆಗಲಾದರೂ ನೀನು ಮಾತಾಡೋದು ನಿಲ್ಲುತ್ತೆ"
ಆದರೆ ತುಂಗಮ್ಮನ ಮುಖ ಅಷ್ಟರಲ್ಲಿ ಜಿಲೇಬಿಯಷ್ಟೆ ಕೆಂಪಗಾಗಿತ್ತು.
ಆಸೆಯ ಅಭಿಮಾನದ ದೃಷ್ಟಿಯಿಂದ ಆ ಮುಖವನ್ನೆ ನೋಡುತ್ತ ಜಲಜ
ಅ೦ದಳು :
“ನಿನ್ನ ಮುಖವೇ ಜಿಲೇಬಿ ಹಾಗಿದೆಯಲ್ಲೇ ನನ್ನಕ್ಕ ! ನೀನು
ಗಲಾಟೆ ಮಾಡ್ಡೆ ಇರೋ ಹಾಗಿದ್ರೆ ಅದನ್ನೆ ತಿಂತೀನಿ"
"ಸಾಕು ಸಾಕೇ ” ಎ೦ ದ ರು ಸರಸಮ್ಮ; “ಹುಚ್ಚು ಮಾತು !
ಎಷ್ಟೂಂತ ಅದನ್ನೇ-!"
ಹಾಗೆ ಹೇಳಿ ಸರಸಮ್ಮ ಮೌನವಾದರು ಆದರೆ ಅವ್ಯಕ್ತವಾದೊಂದು
ಭಯ ಅವರನ್ನು ಹಿಡಿದಲುಗಿಸಿತು. ತಾವು ಒಬ್ಬಂಟಿಗಳೇ ಎಂಬ ಭಾವನೆ
ಅವರಿಗಾಯಿತು ಆದರೆ ಮರುಕ್ಷಣವೆ, 'ನಾನೂ ಸರಿಯೆ ! ಏನೋಮಾತು
ಕೇಳಿ ಏನೋ ವಿಚಾರ' ಎಂದು ತಮ್ಮನ್ನು ತಾವೇ ಗದರಿಸಿಕೊಂಡು ನಿಶ್ಚಿಂತೆ
ಯಾಗಿ ಊಟ ಮಾಡಿದರು.
ದೀವ ಆರಿಸಿ ಹುಡುಗಿಯರೆಲ್ಲ ಮಲಗಿಕೊಂಡಾಗ ಜಲಜ ಪಕ್ಕಕ್ಕೆ
ಕೈಚಾಚಿ ತುಂಗಮ್ಮನ ಬೆರಳುಗಳನ್ನು ಮುಚ್ಚಿ ಅವುಗಳೊಡನೆ ಆಟ
ವಾಡಿದಳು.
"ಅಕ್ಕ, ಅವರು ಎಷ್ಟು ಚೆನ್ನಾಗಿದ್ದಾರೆ ನೋಡೋಕೆ, ಅಲ್ಲ ?”
ಯಾರು- ಎನ್ನುವುದು ತಿಳಿದರೂ ತುಂಗಮ್ಮ ಕೇಳಿದಳು :
"ಯಾರೇ ?"
"ಸಾಕು ಜಂಭ ! ರಾಜಕುಮಾರ-ಇನ್ನು ಯಾರು ? ಬಂದು ನಿನ್ನ
ಮೆಚ್ಚಿಕೊಂಡು ಏನೋ ಅ೦ದು ಹೋದ್ರಲ್ಲ”
"ಸಾಕು ಸುಮ್ನಿರು!"
"ರಾಜಕುಮಾರ-"