ಪುಟ:Abhaya.pdf/೨೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಹೃದಯ ನೋವು ಆಡಿಸಿದ್ದ ಆಂಧ ಮಾತನ್ನು ಜಲಜ ಪೂರ್ತಿ

ಗೊಳಿಸಲಿಲ್ಲ.

ಅಲ್ಲಿಯಾರೂ ಇರಬೇಕಾದ್ದಿಲ್ಲವೆಂದೇ ಡಾಕ್ಟರರೂ ಹೇಳಿದರು.

"ಇಲ್ಲಿ ಸ್ವಾಫ್ ಇರೋದು ಯಾತಕ್ಕೆ? ನಸುಗಳುಯಾಕಿರೋದು?

ನಾವುಯಾಕೆ? ಏನೂತಿಳೀದವರಹಾಗೆ ಆಂತೀರಲ್ಲಮ್ಮ ನೀವು!"

ಆರೀತಿ ತಮ್ಮ ದೊಡ್ಡಮ್ಮನೊಡನೆ ಡಾಕ್ಟರು ಮಾತನಾಡಿದ್ದನ್ನು

ಕಂಡು ತುಂಗಮ್ಮ-ಜಲಜೆಯರಿಗೆ ಕೆಡುಕೆನಿಸಿತು,ಆವಮಾನಿತರಾದವ

ರಂತೆ ಆವರು ಉಗುಳು ನುಂಗಿದರು.

"ಹಾಗಲ್ಲ ಡಾಕ್ಟರ್ ಯಾರಾದರೂ ಇಲ್ಲಿರೇಕೂಂತ ನಾವೇ

ಹೇಳಿದ್ವಿ"

"ಓ!" ಎಂದರು ವಯಸ್ಸಾಗಿದ್ದ ಆ ಡಾಕ್ಟರಮ್ಮ ತುಂಗಮ್ಮನನ್ನು

ನೋಡಿ,"ವೇಷಂಟು ನಿಮ್ಮ ಸ್ನೇಹಿತೇನೋ"

ಜಲಜ ಹದೆಂದು ತಲೆಯಾಡಿಸಿದಳು.

"ಏನೂ ಹೆದರೋಬೇಡಿ ನಿಮ್ಮ ಸ್ನೇಹಿತೇನ ನಾವು ನೋಡ್ಕೋ

ತೀವಿ."

ಆ ಆಶ್ವಾಸನೆಯ ಸ್ವರ ವ್ರಮಾಣಿಕವಾಗಿತ್ತೆಂದು ತುಂಗಮ್ಮನಿಗೆ

ಆನಿಸಿತು,,,ಆ ಬಳಿಕ ಅವರು ಮೂವರೂ ಆಭಯಧಾಮದ ಹಾದಿ

ಹಿಡಿದರು.

ಮಾರನೆದಿನ ಬೆಳಿಗ್ಗೆ ಜಲಜ ಆಸ್ಪತ್ರೆಗೆ ಹೋಗಿ ಬಂದಳು; ಸಂಜೆಗೆ

ತುಂಗಮ್ಮ.

ಆದಾದ ಮರುದಿನ ಸರಸಮ್ಮನೇ ಬೆಳಗ್ಗೆ ಹೋದರು,ಸಂಜೆ ತುಂಗಮ್ಮ

ಹೂರಟಳು,

ಆಕೆ ಆಸ್ವತ್ರೆ ಸೇರಿದಾಗಲಿನ್ನೂ ಐದೂಕಾಲುಗಂಟೆ,ಸಂದಶಕರನ್ನು

ಒಳಕ್ಕೆ ಬಿಡಲು ಮತ್ತೂ ಹದಿನೈದು ನಿಮಿಷ ಬೇಕು ಮೆಟ್ಟಲೇರುವಲ್ಲೆ

ಪುಟ್ಟಗೇಟುಹಾಕಿ ವಾಡಬಾಯ್ ನಿಂತಿದ್ದ,ತುಂಗಮ್ಮ,ಎಲ್ಲರಹಿಂದೆ

ಕಂಬಕ್ಕೂರಗಿ ನಿಂತಳು.

ಪ್ಯಾಂಟಿನ ಎಡಜೇಬಿನೂಳಕ್ಕೆ ಕೈ ಇಳಿಬಿಟ್ಟು ಉಣ್ಣೆಯ ಸೂಟು