ಪುಟ:Abhaya.pdf/೨೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ

೨೮೭

ಧರಿಸಿದ್ದ ಎತ್ತರದ ನಿಲುವಿನ ಕೆಂಪನೆಯ ಮುಖದ ಆ ಯುವಕ ಯಾರನ್ನೋ
ಹುಡುಕುತಿದ್ದ. ಹಲವು ಮುಖಗಳ ಜತೆಯಲ್ಲಿ ಅದೂ ಒಂದಾಗಿ ತುಂಗಮ್ಮನ
ಕಣ್ಣಿನೆದುರು ಹಾದು ಹೋಯಿತು ಆದರೆ ಆ ಕ್ಷಣವೆ ವಿದ್ಯುತ್‌ ಸಂಚಾರ
ವಾದಂತಾಗಿ ತುಂಗಮ್ಮ ಮತ್ತೊಮ್ಮೆ ಆ ಯುವಕನನ್ನು ನೋಡಿದಳು.
ಆತನನ್ನು ಮರೆಯುವ ಪ್ರಶ್ನೆಯೇ ಇರಲಿಲ್ಲ ಆದರೆ ಇಲ್ಲಿ--ಆಸ್ಪತ್ರೆಯಲ್ಲಿ-
ಆತ ಏನು ಮಾಡುತಿದ್ದಾನೆ ? ಆತನ ಸಂಬಂದಿಕರು ಯಾರಾದರೂ ರೋಗಿ
ಯಾಗಿ ಇರುವರೇನೋ ಇದ್ದರೂ ಈ ವಾರ್ಡಿನಲ್ಲಿ ! ಸಾಧ್ಯವಿಲ್ಲದ ಮಾತು
ಅಷ್ಟು ಶ್ರೀಮಂತರು ಸ್ಪೆಷಲ್‌ವಾರ್ಡಿನಲ್ಲೇ ಅಲ್ಲವೆ ಇರಬೇಕಾದ್ದು ?
ಅಲ್ಲಿ ನೆರೆದಿದ್ದ ಹೆಂಗಸರ ಗಂಡಸರ ಭುಜಗಳ ಮೇಲಿಂದ ತಲೆಗಳ
ಮೇಲಿಂದ ದೃಷ್ಟಿಹಾಯಿಸಿ ಆತ ನೋಡುತಿದ್ದ, ಯಾರನ್ನೋ ಹುಡುಕುತಿದ್ದ.
ತನ್ನನ್ನೆ ಎಲ್ಲಾದರೂ ಹುಡುಕುತ್ತಿರಬಹುದೆ ? ಛೇ ! ಎಂಥ ಯೋಚನೆ!
ಆ ಯುವಕನೆಲ್ಲಿ ? ಅಭಯಧಾಮದ ಬಡಹುಡುಗಿಯಾದ ತಾನೆಲ್ಲಿ ?
ಆಹ್ವಾನದ ಗಂಟೆ ಬಾರಿಸಿತು ಮೆಟ್ಟಲೇರಿ ಹೋಗುತ್ತಿದ್ದವರನ್ನು
ನೋಡುತ್ತ ನಿಂತ ಆ ಯುವಕ, ಆತನಿಗೆ ಕಾಣಿಸಿಕೊಳ್ಳದಿರುವುದೇ ವಾಸಿ
ಎಂದು ತುಂಗಮ್ಮ, ಮೆಲ್ಲನೆ ಮೆಟ್ಟಿಲೇರುತಿದ್ದ ಚೆನ್ನಾಗಿ ಬೊಜ್ಜು ಬೆಳೆದಿದ್ದ
ಒಬ್ಬಳಿಗೆ ಮರೆಯಾಗಿ ತಾನೂ ಏರತೊಡಗಿದಳು. ಆಗ ಸ್ವರ ಕೇಳಿಸಿತು:
“ ರೀ ನಿಲ್ಲಿ !”
ಭಾಷಣ ಚೆನ್ನಾಗಿತ್ತು ಎಂದು ಹಿಂದೆ ಹೇಳಿದ್ದ ಧ್ವನಿಯೇ. ಆದರೆ
ಹೆಸರು ಹಿಡಿದು ಯಾರೂಕರೆದಿರಲಿಲ್ಲ ತನದಲ್ಲವೆಂದು ನೇರವಾಗಿ ಹೊರಟು
ಹೋಗಬಹುದಿತ್ತು ಆದರೂ-
ತುಂಗಮ್ಮ ಅಲ್ಲಿ ಗೋಡೆಗೊರಗಿ ನಿಂತು ಆತನ ಮುಖ ನೋಡಿದಳು.
ಮುಖದ ಆಕಾಶದಮೇಲೆ ವಿಸ್ತಾರವಾದ ಚಂದ್ರನಾಗಿತ್ತು ನಗು.
ತುಂಗಮ್ಮನ ಮೈ ಬೆವತುಹೋಯಿತು
ಏನು ಮಾಡಬೇಕೆಂದು ತಿಳಿಯದೆ ನಿಂತಿದ್ದ ತುಂಗಮ್ಮನ ಸಮಸ್ಯೆ
ಯನ್ನು ಬಗೆಹರಿಸುವವನಂತೆ ಯುವಕ ತಾನೂ ಮೆಟ್ಟಿಲೇರಿದ. ಇಬ್ಬರೂ
ಮುಂದುವರಿದರು.
"ನಾನು ಸೋಮಶೇಖರ್. ಜ್ಞಾಪಕ ಇದೆಯೊ ?”