ಮೌನವಾಗಿ,ಲಜ್ಜೆಯಿಂದ ಕೆಂಪೇರಿದ್ದ ಮುಖವನ್ನಷ್ಟೆ ಚಲಿಸಿ,
ಹೂಂ ಎಂಬ ಸಾಂಕೇತಕ ಉತ್ತರವನ್ನು ತುಂಗಮ್ಮ ಕೊಟ್ಟಳು.
"ನಿಮ್ಮನ್ನೇ ಹುಡುಕಿಕೊಂಡು ಬಂದೆ. ನಿಮ್ಮ ಗುರುತು ನನಗೆ
ಸಿಗುತ್ತೋ ಇಲ್ವೋಂತ ಸ್ವಲ್ಪ ಅನುಮಾನವಾಯ್ತು.ಆದಿನ ಬೇರೆ ಸೀರೆ
ಉಟ್ಕೋಂಡಿದ್ರಿ.ಅಲ್ವೆ?ಆದರ ನೀವು ಯಾವ ಸೀರೆ ಉಟ್ಕೋಂಡ್ರೂ ಒಂದೇ
ರೀತಿ ಕಾಣ್ತೀರ....
ಆತ ಮಾತುಗಾರ ಆ ಮಾತುಗಳು ಆಕೆಯನ್ನು ಸುತ್ತುವರಿದು
ಒಂದೇಸಮನೆ ಮುತ್ತುತಿದ್ದುವು. ತನ್ನನ್ನು ಹುಡುಕಿಕೊಂಡು ಯಾಕೆ ಬಂದ
ಆತ?
ಮೇಲಿನ ಮಹಡಿ ತಲಪುತ್ತಲೇ ಜಗಲಿಯಮೇಲೆ ಅವರಿಬ್ಬರೂ
ನಿಂತರು.
"ನಾನುಯಾಕೆ ನಿಮ್ಮನ್ನ ಹುಡುಕಿಕೊಂಡು ಬಂದೆ ಅಂತ ಕೇಳ್ಬಾರ್‍ದೆ?"
ಹೌದು,ಯಾಕೆ?"
ಅಬ್ಬ, ಆ ಪ್ರಶ್ನೆಯಾದರೂ ಬಂತಲ್ಲ! ನಿನ್ನೆಯ ದಿವಸ ನಿಮ್ಮ
ಕಾರ್ಯದರ್ಶಿ ಮನೆಗೆ ನನ್ನಕ್ಕ ಹೋಗಿದ್ದಾಗ ಏನು ಮಾತು
ಬಂತಂತೆ-ಅಭಯದಾಮ ಯಾವಳೋ ಹುಡುಗಿ,ಆಸ್ಪತ್ರೇಲಿದಾಳೆ,
ಟೈಫಾಯ್ಡು, ಅಂತ.ಅಕ್ಕ ಮನೆಗೆ ಬಂದು ಹಾಗೆ ಅಂದಾಗ, ಹುಡುಗಿ
ಹೆಸರೇನೂಂತ ಕೇಳ್ದೆ ಅವಳಿಗೆ ನೆನಪಿರಲಿಲ್ಲ.ನನಗೆ ಗೊತ್ತಿದ್ದುದು ಒಂದೇ
ಹೆಸರು. ತುಂಗಮ್ಮನೆ?--ಅಂತಕೇಳ್ದೆ. ಹೂಂ--ಅಂದರು ಅಕ್ಕ.
ಆಮೇಲೆ, ಇದ್ದರು ಇರಬಹುದು ಅಂದ್ಲು. ಅದೇನೊ ನೋಡ್ಕೊಂಡೇ
ಬರೋಣಾಂತ ಇವತ್ತು ಆಭಯಧಾಮಕ್ಕೇ ಹೋದೆ. ಅಲ್ಲಿ
ಏನಾಯ್ತೂಂತ?"
--ಹಾಗೆ ಕೇಳಿ ಆತ ನಗತೊಡಗಿದ.
"ಏನಾಯ್ತು?"
"ನಿಮ್ಮ ಅಸಿಸ್ಟೆಂಟ್ ಎಲ್ಲೀಂತ ಸರಸಮ್ಮನವ ಕೇಳ್ದೆ.ಆಸ್ಪತ್ರೇ
ಲಿದಾರೆ--ಅಂದ್ರು. ಈಗ ಹ್ಯಾಗಿದೆ ಅವರ್‍ಗೆ?--ಅಂದೆ."
"ಓ!"