"ನೀವೇನೂ ಚಿಂತಿಸ್ಬೇಡಿ ಮಿ ಸೋಮಶೇಖರ್. ನಿಮ್ಮ ಪೇಷೆಂಟ್ನ
ನಾವು ನೋಡ್ಕೋತೀವಿ" "ಅಷ್ಟು ಮಾಡೀಪ್ಪಾ...."
ಬಂದ ಮೂವರೂ, ಹಿಂತಿರುಗಿದರು. ಇಬ್ಬರು ಡಾಕ್ಟರನ್ನೂ ವಾರ್ಡಿನ
ಹೊರಗೆ ಬಿಟ್ಟು ಸೋಮಶೇಖರನೋಬ್ಬನೇ ತುಂಗಮ್ಮನೆಡೆಗೆ ಬಂದ.
ಇದೆಲ್ಲವೂ ಕನಸೆ? ಎಂದು ಭ್ರಮಿಸಿದಳು ತುಂಗಮ್ಮ.
ಸಮೀಪಿಸಿದ ಸೋಮಶೇಖರ ಹೇಳಿದ:
"ನಾಳೆ ಆ ಕೊನೇ ಬೆಡ್ಡಿಗೆ ಬದಲಾಯಿಸ್ತಾರೆ. ಅಲ್ಲಿ ಅನುಕೂಲ
ವಾಗಿರುತ್ತೆ"
ತುಂಗಮ್ಮನ ಕಣ್ಣುಗಳಲ್ಲಿ ಕೃತಜ್ಞತೆಯಿತ್ತು. ಮಾತು ಮಾತ್ರ ಆತನೇ
ಮುಂದುವರಿಸ ಬೇಕಾಯಿತು.
"ಟೈಫಾಯ್ಡೇನೂ ದೊಡ್ಡ ವಿಷೆಯವೇ ಅಲ್ಲ ಆರೈಕೆ ಚೆನ್ನಾಗಿದ್ರೆ
ಸುಲಭವಾಗಿ ಗುಣವಾಗುತ್ತೆ."
"ಹೌದು."
ಸಂದರ್ಶಕರೆಲ್ಲ ಹೊರಡಲು ಆದೇಶವೀಯುವ ಗಂಟೆ ಬಾರಿಸುವುದಕ್ಕೆ
ಮುಂಚೆಯೇ ಸೋಮಶೇಖರ ಮತ್ತು ತುಂಗಮ್ಮ ಹೊರಬಿದ್ದರು.
"ಸ್ಪಷಲ್ ವಾರ್ಡಿನಲ್ಲಿ ಇರಿಸ್ಬೇಕಾಗಿತ್ತು"
"ಆಗ್ಲಿಲ್ಲ...."
"ಇಲ್ಲೂ ಪರವಾಗಿಲ್ಲ ಇನ್ನೇನು ಆ ಡಾಕ್ಟರೂ ಚೆನ್ನಾಗಿ ನೋಡ್ಕೋ
ತಾರೆ."
"ನಿಮ್ಮ ಸ್ನೇಹಿತರು ಅಲ್ವೆ?'
--ತುಂಗಮ್ಮನ ನಾಲಿಗೆ ಚಲಿಸತೊಡಗಿತ್ತು ಅಂತೂ!
"ನಾಗರಾಜ? ಹೌದು."
"ಆ ಲೇಡಿ ಡಾಕ್ಟರು?"
ಸೋಮಶೇಖರ ತುಂಗಮ್ಮನ ಮುಖ ನೋಡಿದ. ಅಲ್ಲೇನೂ ಇರಲಿಲ್ಲ.
ಆದರೂ ಆ ನೋಟದ ಹಿಂದೆ--?
"ನಮ್ಮ ನಾಗರಾಜನ ಸ್ನೇಹಿತೆ."