ಪುಟ:Abhaya.pdf/೨೯೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ -ಆ ಪುಟ್ಟಕಾರು ಎಲ್ಲಿಯೋ ನಿಂತುಕೊಂಡಿರಬೇಕು ಎಂದಿದ್ದಳು ತುಂಗಮ್ಮ. ಅದಿರಲಿಲ್ಲ.
"ನನಗೆ ಸೈಕಲ್ಲಿದೆ. ತಾಳಿ, ಬಂದ್ಬಿಟ್ಟಿ."
ಅಲ್ಲೇ ಗುರುತುಚೀಟಿ ಅಂಟಿಸಿಕೊಂಡು ನಿಂತಿದ್ದ ತನ್ನ ಒಳ್ಳೆಯ ಹೊಸ ಸೈಕಲನ್ನು ಸೋಮಶೇಖರ ತಳ್ಳಿಕೊಂಡು ಬಂದ.ಆಗ ತುಂಗಮ್ಮನ ಮನಸಿನಲ್ಲಿದ್ದುದನ್ನು ಊಹಿಸಿವುದೇನೂ ಆತನಿಗೆ ಕಷ್ಟವಾಗಲಿಲ್ಲ.
"ಆ ಪುಟುಕೋಸು ಕಾರು ನಮ್ಮ ಭಾವನ್ದು.ಎಲ್ಲಿಗಾದರೂ ಅದರಲ್ಲಿ ಕೂತುಹೋಗೋದಕ್ಕಿಂತಾನೂ ನಡಕೊಂಡು ಹೋಗೋದೇ ವಾಸಿ."
ಕಾರಿನಂತಹ ಬೆಲೆ ಬಾಳುವ ವಸ್ತುಗಳ ಬಗೆಗೆ ಸೋಮಶೇಖರ ಅಷ್ಟು ಲಘುವಾಗಿ ಮಾತನಾಡಿದುದನ್ನು ಕಂಡು ತುಂಗಮ್ಮನಿಗೆ ಸಂತೋಷವಾಯಿತು.
....'ನಮಸ್ತೆ' ಎಂದು ವಂದಿಸಿ ಆಕೆ ಬಸ್ಸಿನಲ್ಲಿ ಕುಳಿತಳು.
ಬಸ್ ಓಡುತಿದ್ದಂತೆ ರುಂಯ್ ರುಂಯ್ಯನೆ ಶೀತಲಗಾಳಿ ತುಂಗಮ್ಮನ ಮುಖಕ್ಕೆ ಬೀಸಿತು ಅದು ಆಹ್ಲಾದಕರವಾಗಿತ್ತು.ಹೃದಯಬನದಲ್ಲಿ ಕೋಗಿಲೆ 'ಕೂ ಹೂ'ಎನ್ನುತಿತ್ತು.
'ಛಿ! ಹೀಗಾಗಬಾರದು!"
-ಎಂದು ತನ್ನನ್ನು ತಾನೆ ಟೀಕಿಸಿಕೊಂಡಳು ತುಂಗಮ್ಮ.
ಆ ನಾರಾಯಣಮೂರ್ತಿ.... ಇಷ್ಟೆಲ್ಲ ಅನುಭವಿಸಿದಮೇಲೆಯೂ ಇಷ್ಟು ಬೇಗನೆ ಗಂಡಸಿನ ಸ್ವರಕೇಳಿಯೇ ತಾನು ಮರುಳಾಗುತ್ತಿರುವೆನಲ್ಲ- ಥೂ!ಥೂ!
ಆದರೆ ಸೋಮಶೇಖರ ಒಳ್ಳೆಯವನು ಆ ಮುಖದಲ್ಲಿ ಕಪಟ ಕಿಂಚಿತ್ತಾದರೂ ಇತ್ತೆ?
ಆದರೇನಂತೆ? ತಾನು ಆತನ ಬಗೆಗೆ ಚಿಂತಿಸಕೂಡದು.ಅದು ಸರಿಯಲ್ಲ
....ಬಸ್ಸಿನಿಂದಿಳಿದು ನಡೆದು ಅಭಯಧಾಮ ಸಮೀಪಿಸಿ ಬಾಗಿಲು ತಟ್ಟುತ್ತಾ ತುಂಗಮ್ಮ ಅಂದುಕೊಂಡಳು:
'ಈ ಲಲಿತಾ ಕಾಹಿಲೆ ಬೀಳ ಬಾರದಾಗಿತ್ತು....ಥೂ....ಇನ್ನು ಈ ಹಾಳು ಯೋಚನೆ ಬೇರೆ!'