ಪುಟ:Abhaya.pdf/೩೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಬಂಡೆಯ ಮೇಲೆ ಕುಳಿತು ಸಾವರಿಸಿಕೊಂಡು ಎದ್ದು, ಆಕೆ ಅಲ್ಲೆ

ಕತ್ತಲಲ್ಲಿ ಜಲಬಾಧೆ ತೀರಿಸಿಕೊಂಡಳು. ಮತ್ತೆ ಆಕೆ, ಜನರು ವಾಸವಾಗಿದ್ದ ಪ್ರದೇಶವನ್ನು ಸಮೀಪಿಸಲೆಂದು ಹಾದಿ ಇಳಿದಳು

ರಸ್ತೆಯಲ್ಲಿ ವಾಹನಗಳು ಓಡಾಡುತಿದ್ದುವು-ಸಾಮಾನು ಹೇರಿ

ಕೊಂಡು ಮುಸುಕು ಧರಿಸಿದ್ದ ಲಾರಿಯೊಂದು....ನಗರ ಸಂಚಾರಿಯಾದ ನೀಲಿ ಬಸ್ಸು....ವೇಗವಾಗಿ ಚಲಿಸುತಿದ್ದ ಕಾರುಗಳು...ಪ್ರದೇಶದೊಳಗಿಂದ ಬಂದು ಹೆದ್ದಾರಿ ಸೇರಿದ ಆಟೋ-ರಿಕ್ಷಾ....

ಅವುಗಳನ್ನೆಲ್ಲ ಯಾಂತ್ರಿಕವಾಗಿ ನೋಡುತ್ತ ತುಂಗಮ್ಮ, ತಾನೂ

ಮೆಲ್ಲನೆ ಚಲಿಸುವ ಯಂತ್ರವಾಗಿ, ಹೆದ್ದಾರಿಯನ್ನು ದಾಟಿ ಅಡ್ಡ ಬೀದಿಗಿಳಿದಳು.

ಅಲ್ಲಿಯೇ ಎಲ್ಲಿಯೋ ಇರಬೇಕು ಆಕೆಯ ಆ ಪಯಣದ ಕೊನೆಯ

ನಿಲ್ದಾಣ. ಆ ಪ್ರದೇಶದ ಹೆಸರು ಗೊತ್ತಿತ್ತು ಅವಳಿಗೆ ತಾನು ಹೋಗಬೇಕಾದ ಮನೆ ಅಲ್ಲಿರುವುದನ್ನೂ ಆಕೆ ಬಲ್ಲಳು.

-ಮನೆ ಅದು ಮನೆ ಹೌದೋ ಅಲ್ಲವೋ ತುಂಗಮ್ಮನಿಗೆ ಅದರ

ಹೆಸರು ಮಾತ್ರ ತಿಳಿದಿತ್ತು

ಯಾರನ್ನು ಕೇಳಬೇಕು ಆಕೆ?ಯಾರನ್ನು?

ಒಂದು ವೇಳೆ ಆ ಸ್ಥಳವನ್ನು ತಾನು ಸೇರುವುದಾಗದೇ ಹೋದರೆ?

ಬಂದ ಹಾದಿಯಲ್ಲೆ ಹಿಂತಿರುಗಬೇಕಾದ ಪ್ರಮೇಯ ಒದಗಿತೆಂದರೆ?

ಹಾಗೆ ಹಿಂತಿರುಗುವುದು ಸಾಧ್ಯವೇ ಇರಲಿಲ್ಲ ಎಲ್ಲ ಸಂಬಂಧ

ವನ್ನೂ ಕಡಿದುಕೊಂಡೇ ಬಂದಿದ್ದಳಾಕೆ

ಹಾಗಾದರೆ ಯಾರನ್ನಾದರೂ ಕೇಳಿ ನೋಡಬೇಕು. ಅದರಲ್ಲಿ ಅಪ

ಮಾನದ ಮಾತೇನು ಬಂತು?ಭಯದ ಮಾತೇನು?

ಅದು, ಜನಸಂಚಾರವೇ ಇರದಿದ್ದ ಬೀದಿ. ಅಲ್ಲೊಂದು ಮನೆ

ಇತ್ತು, ಇಲ್ಲೊಂದು ಮನೆ. ನೋಡಿದರೇ ತಿಳಿಯುತಿತ್ತು-ಉಂಡು ಉಡಲು ಸಾಕಷ್ಟು ಇದ್ದವರ ಮನೆಗಳು ಗೇಟುಗಳ ಬಳಿಯಲ್ಲಿ ಮಕ್ಕಳನ್ನಾಡಿಸುತ್ತಲೋ ಪಕ್ಕದಮನೆಯವರೊಡನೆ ಮಾತನಾಡುತ್ತಲೋ ಹೆಂಗಸರು ನಿಂತಿದ್ದರು ಅವರು ಯಾರನ್ನಾದರೂ ತುಂಗಮ್ಮ ಕೇಳಬಹುದೆ? ಆ ಮನೆ ಎಲ್ಲಿ-ಎಂದು ಕೇಳಬಹುದೆ?