ವಿಷಯಕ್ಕೆ ಹೋಗು

ಪುಟ:Abhaya.pdf/೩೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೯೫ ಮಧ್ಯಮವರ್ಗ ಹೇಳಿಕೊಳ್ಳೂವ ಆಸ್ತಿಪಾಸ್ತಿ ಇರಲಿಲ್ಲ ಆದರೆ ದಕ್ಷ

ಇಂಜನಿಯರಾದ ಅವರು ಗಂಡ ವೆಚ್ಚಕ್ಕೆ ಬೇಕಾದಷ್ಟು ಸಂಪಾದಿಸುತಿದ್ದರು.

ವಿಧವೆಯಾದ ಅವರು ತಾಯಿ ಮಗಳು ಮನೆಯಲ್ಲೇ ಉಳಿದಿದ್ದರು ಒಬ್ಬನೇ

ಗಂಡು ಮಗನಾದ ಸೋಮಶೇಖರ ತಂದೆಯ ಅಳಿದುಳಿದ ಆಸ್ತಿಯನ್ನೂ ತನ್ನ

ವಿದ್ಯಾಭ್ಯಾಸಕ್ಕಾಗಿ ಕರಗಿಸಿದ ಆತ ಪೂನಾದಿಂದ ಹಿಂತಿರುಗಿ ಪ್ರಾಕ್ಟೀಸು

ಆರಂಭಿಸಿದುದೂ ಅದೇ ವರ್ಷ....

-ಇದೀಗ ಕಾರ್ಯದರ್ಶಿನಿಯ ಮನೆಯಲ್ಲಿ ಯಾವುದೋ ಸಂದರ್ಭ

ದಲ್ಲಿ ಅನಿರೀಕ್ಷಿ ತವಾಗಿ ಸರಮ್ಮನಿಗೆ ತಿಳಿದು ಬಂದಿದ್ದ ವಿಷಯ.

ಆತನೆಲ್ಲಾದರೂ ತುಂಗಮ್ಮನನ್ನು ಪ್ರೀತಿಸುತ್ತಿರಬಹುದೆ ? ಆಧುನಿಕ

ಬೆಡಗಿನ ವಿದ್ಯಾವತಿಯರು, ದುಡ್ಡಿದ್ದವರು,ಸ್ವಜಾತಿ_ಸ್ವಗೋತ್ರದವರು

ಎಷ್ಟೋಜನ ಸಿಗುವಾಗ ಆತ ತುಂಗಮ್ಮನನ್ನು ಮೆಚ್ಚಿಕೊಳ್ಳುವುದೆಂದರೇನು?

ಅಥವಾ ಅವನೆಲ್ಲಾದರೂ ದುರುದ್ದೇಶದಿಂದ ಹುಡಗಾಟವಾಡುತ್ತಿರ

ಬಹುದೆ? ಆತನ ಗುಣವೆಂಧದೋ !

'ಇಲ್ಲಿಗೆ ಬರಬೇಡ' ವೆಂದು ನೇರವಾಗಿ ಸೋಮರೇಖರನಿಗೆ ಹೇಳುವ

ಹಾಗಿಲ್ಲಿ. ಮೊದಲು ಸುಂದರಮ್ಮನಿಗೆ ದೂರು ಕೊಡಾಬೇಕು 'ಯಾಕೆ ?'

ಎಂದು ಅವರು ಕೇಳಿದರೆ ? ಆಗ ತಮಗೆ ಮುಖ ಭಂಗವಾಗುವುದು....ಹಾಗೆ

ಮಾಡುವುದೂ ಸರಿಯೆನಿಸದು

ಇದೊಳ್ಳೆಯ ಉಭಯ ಸಂಕಟ !

ಹಾಗಲ್ಲದೆ, ಸೋಮರೇಖರ ನಿಜವಾಗಿಯೂ ತುಂಗಮ್ಮನನ್ನು ಪ್ರೀತಿ

ಸುವುದೇ ಹೌದಾದರೆ ? ಅದು ಇನ್ನೊಂದು ಸಮಸ್ಯೆ--ಅದನ್ನು ಕುರಿತು

ಚಿಂತಿಸಲು ಸರಸಮ್ಮ ಇಷ್ಟಪಡಲಿಲ್ಲ ತುಂಗಮ್ಮನೆಲ್ಲಾದರೂ ಮದುವೆಯಾಗಿ

ತಮ್ಮನ್ನು, ಅಭಯಧಾಮವನ್ನು, ಬಿಟ್ಟು ಹೋಗಬಹುದೆಂಬುದು ಅವರು

ಯೋಚಿಸಲು ಇಚ್ಛಿಸಿದ ವಿಷಯ

ಅವರೆದ್ದರು. ಆದರೆ ಮುಖ ಗಂಟಕ್ಕಿಕೊಂಡಿತು.

ಆ ಬಳಿಕ, ಕಸ ಸರಿಯಾಗಿ ಗುಡಿಸಲಿಲ್ಲವೆಂದು, ಆದಿನ ಕಸಗುಡಿಸುವ

ಬ್ಯಾಚಿನವರನ್ನು ಬಯ್ದರು.

ತುಂಗಮ್ಮನಿಗೂ ಜಲಜೆಗೂ ಇತರ ಹುಡುಗಿಯರು ಹಲವರಿಗೂ