ವಿಷಯಕ್ಕೆ ಹೋಗು

ಪುಟ:Abhaya.pdf/೩೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಅಭಯ ೨೫೬

ಸರರಮ್ಮನ ವರ್ತನೆಯಿಂದ ವ್ಯಧೆಯಾಯಿತು. ತಾನೇನು ತಪ್ಪು ಮಾಡಿ

ದೆನೋ ಎಂದು ಪ್ರತಿಯೊಬ್ಬರೂ ಚಿಂತಿಸಿದರು.

ಜಲಜ ಕೇಳಿದಳು :

"ಯಾಕೆ ತುಂಗಕ್ಕ ದೊಡ್ಡಮ್ಮ ಹೀಗಿದಾರೆ ?"

ತುಂಗಮ್ಮನಿಗೆ ಉತ್ತರ ಗೊತ್ತಿತ್ತು.ಸೋಮಶೇಖರ ಬಂದು

ಹೋದುದೇ ಅದಕ್ಕೆ ಕಾರಣವಿರಬೇಕು; ತಪ್ಪು ತನ್ನದೇ; ಎಂದು

ಆಕೆ ತಿಳಿದಿದಳು. ಆದರೆ ಹಾಗೆಂದು ಬಹಿರಂಗವಾಗಿ ಒಪ್ಪಿಕೊಳ್ಳುವ

ಹಾಗಿರಲಿಲ್ಲ.

"ಏನೋ ಗೊತ್ತಿಲ್ಲಮ್ಮ "

ಜಲಜ ಬೆಳಿಗ್ಗೆ, ಆಸ್ಪತ್ರೆಗೆ ಹೋಗಿ ಬಂದಳು

"ಜ್ವರ ಇಳಿದಿದೆ ದೊಡ್ಡಮ್ಮ ; ಕಿಟಕಿಯ ಹತ್ತಿರ ಮಲಗಿಸಿದ್ದಾರೆ."

-ಎಂದು ವರದಿಮಾಡಿದಳು

ಮತ್ತೆ, ಕಿಟಕಿಯ ಹತ್ತಿರ ಮಲಗಿಸಲು ಕಾರಣರಾದವರ ನೆನಪು

ಸಂಜೆ, ತಾವೊ ತುಂಗಮ್ಮನ ಜತೆಯಲ್ಲಿ ಹೊರಡ ಬೇಕೆಂದುಕೊಂಡರು

ಸರಸಮ್ಮ.ಆ ಸೋಮಶೇಖರ ಬರಬಹುದು ತಮಗೆ ತಿಳಿದೂ ತಿಳಿದೂ

ತಮ್ಮ ಕಣ್ಣೆದುರಲ್ಲೇ ಆಚಾತುರ್ಯನಾಗಬಾರದು.

ಆದರೆ ತುಂಗಮ್ಮ ಅಂದಳು :

"ಇವತ್ತು ಸಾಂಕಾಲ ನಾನು ಆಸ್ಪತ್ರೆಗೆ ಬರೋಲ್ಲ ದೊಡ್ಡಮ್ಮ ;

ಯಾಕೋ ಬೇಜಾರು "

ಹಾಗನ್ನೆ ಬ್ಬಾರದಿತ್ತು ಎಂದಿತು ಮನಸ್ಸು. ಎಲ್ಲಿಯಾದರೂ 'ಬೇಡ

ಹಾಗಾದರೆ' ಎಂದು ದೊಡ್ಡಮ್ಮ ನೆಂದರು- ಎಂದು ಮಿಡುಕಿತು

"ಯಾಕೆ ? ನಾನೂ ಬರ್‍ತೀನಿ. ನಡೀ ಹೋಗೋಣ."

ಅದೊಳ್ಳೆಯ ಪರಿಹಾರ ತಾನು ಹೋಗುವುದು ತಪ್ಪಲಿಲ್ಲ,

ಜತೆಗೆ ದೊಡಮ್ಮನ ರಕ್ಷಣೆ ಬೇರೆ. ..............

ವಿಚಿತ್ರ ಮನೋವ್ರತ್ತಿಯಯುವಕನಾಗಿದ್ದ ಸೋಮಶೇಖರ.

ಎಷ್ಟೋ ಹುಡುಗಿಯರನ್ನು ಕಣ್ಣಲ್ಲಿ ಕಂಡವನು ಪೊನಾದಲ್ಲಿ ಓದುತಿದ್ದಾಗ ಪ್ರಣಯದ