ಚೆಲ್ಲಾಟವನ್ನೂ ಒಂದಿಷ್ಟು ಅನುಭವಿಸಿದವನು ಆದರೆ ಆತ ಕೆಟ್ಟವನಾಗಿರಲಿಲ್ಲ ; ಮೋಸಗಾರನಾಗಿರಲಿಲ್ಲ
ಅಭಯಧಾಮದ ವಾರ್ಷಿಕೋತ್ಸವದ ವಾತಾವರಣ ಆತನಿಗೆ ನೂತನ ಅನುಭವವನ್ನು ಕೊಟ್ಟಿತ್ತು. ತುಂಗಮ್ಮನನ್ನು ಮೊದಲು ಕಂಡಾಗ ಅವನ ಹೃದಯವನ್ನು ಯಾರೋ ಹಿಡಿದು ಕುಲುಕಿದ ಹಾಗಾಯಿತು ಅಕ್ಕನನ್ನು ಪೀಡಿಸಿ ಆ ಹುಡುಗಿಯ ವಿಷಯ ಆತ ಕೇಳಿ ತಿಳಿದ-ಎಲ್ಲವನ್ನೂ
ಎಲ್ಲವನ್ನೂ ಕೇಳಿದಮೇಲೂ ಮನಸ್ಸು ತುಂಗಮ್ಮನನ್ನು ಬಿಟ್ಟಿರಲು ಒಪ್ಪಲಿಲ್ಲ.
ಯಾಕೆ ಈ ವಾತ್ಸಲ್ಯ? ಇದಕ್ಕೇನು ಕಾರಣ? ಕನಿಕರವೆ? ಪ್ರೀತಿಯೆ? __ಅದೇನೊ ನಿರ್ಧಾರವಾಗಿ ಆವನಿಗೆ ತಿಳಿಯಲಿಲ್ಲ ಆದರೆ ಇಷ್ಟು ಮಾತ್ರ ನಿಜ. ತುಂಗಮ್ಮನ ನೆನಪಾದಾಗಲೆಲ್ಲ ಆಕೆಯನ್ನು ತನಗಿಂತ ಕೀಳಾಗಿ ಕಾಣುವುದು ಆತನಿಂದ ಸಾಧ್ಯವಾಗಲಿಲ್ಲ
...............
ಆ ಸಂಜೆಯೂ ಸೋಮರೇಖರ ಬಂದಿದ್ದ. ಉಣ್ಣೆಯ ಉಡುಪಿರಲಿಲ್ಲ. ತುಂಗಮ್ಮನ ಜತೆಯಲ್ಲಿ 'ಪ್ರತ್ಯೇಕ' ವಾಗಿ ತೋರಬಾರದೆಂದು ಹತ್ತಿಬಟ್ಟೆಯ ಪ್ಯಾಂಟು ಷರಟು ಧರಿಸಿದ್ದ.
ಆತನ ವಂದನೆಯನ್ನು ಸ್ವೀಕರಿಸುತ್ತ ಸರಸಮ್ಮ ಬಲು ಸೂಕ್ಶ್ಮ ವಾಗಿ ಆ ಮುಖವನ್ನು ದಿಟ್ಟಿಸಿದರು ಅದು ನಿಷ್ಕಳಂಕವಾಗಿಯೇ ತೋರಿತು.
ಆತನೊಡನೆ ಇಲ್ಲವೆ ಸುಂದರಮ್ಮನೊಡನೆ ಮಾತನಾಡಬೇಕೆಂಬ ಯೋಚನೆಯನ್ನೇ ಸರಸಮ್ಮ ಬಿಟ್ಟು ಕೊಟ್ಟರು.
....................
ಲಲಿತಾ ಗುಣಮುಖಳಾದಳು ಮೆಲ್ಲನೆ ತುಂಗಮ್ಮ ತಪ್ಪದೆ ಪ್ರತಿ ಸಂಜೆಯೂ ಬರುತಿದ್ದಳು.
ಸೋಮರೇಖರ ಬರದೇ ಇದ್ದರೆ ಅವಳಿಗೆ ಸಂಕಟನಾಗುತಿತ್ತು
ಲಲಿತಾ ನಕ್ಕು ಕೇಳುತಿದ್ಧಳು:
"ಬರಲಿಲ್ವಾ ?"
"ಯಾರು?"