ಪುಟ:Abhaya.pdf/೩೦೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ

೨೯೮

"ನಿನ್ನ ಅವರು.
"ಧೂ ! ಹಾಗನ್ಬಾರದು ಲಲಿತಾ.”
"ತಪ್ಪಾಯ್ತು.”
ತುಂಗಮ್ಮ, ' ಹಾಗನ್ಬಾರದು' ಎಂದು ಹೇಳಲು ಕಾರಣ, ಹಾಗೆ ಆಗಲಾರದು ಎಂಬ ಭಯ.
ತಡವಾದ ದಿನ ಸೋಮಶೇಖರ ಕ್ಷಮಾಯಾಚನೆಯ ನಗೆಯೊಡನೆ ಬರುತಿದ್ದ. ಸೇಬು, ಕಿತ್ತಳೆ, ಇತ್ಯಾದಿಗಳನ್ನು ಅವನು ತರುತಿದ್ದ.
“ನನ್ನ ತುಂಗಕ್ಕನಿಂದಾಗಿ ಇಷ್ಟೆಲ್ಲಾ___'
ಎಂದುಕೊಂಡಳು ಲಲಿತಾ.