ಪುಟ:Abhaya.pdf/೩೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೨೦

ಬೆಳಿಗ್ಗೆ ಐದು ಘಂಟೆಗೇ ಎಚ್ಚರವಾಯಿತು ತುಂಗಮ್ಮನಿಗೆ ಅದರೆ

ಏಳುವ ಮನಸ್ಸಾಗಲಿಲ್ಲ. ಬಲವಾಗಿ ತನ್ನನ್ನು ಅವರಿಸಿದ್ದ ಹಳೆಯ ಹೊಸ

ಯೋಚನೆಗಳ ಮುಸಕನ್ನು ತೆರೆಯಲು ಅಕೆ ಸಮರ್ಥಳಾಗಲಿಲ್ಲ.

" ಕಳೆದ ಸಂಜೆ ಎಷ್ಟೋದಿನಗಳಿಂದ ನಿರೀಕ್ಚಿಸಿದ್ದ ಅ ಘಳಿಗೆ ಬಂದು

ಬಿಟ್ಡಿತು.

.......................

ಸೋಮಶೇಖರ ಸಂಜೆ ಹೊತ್ತು ದಿನವೂ ಅಸ್ಪತ್ರೆಗೆ ಬರುತಲಿದ್ದಾಗ

ಆತನ ಸಾಮಿಪ್ಯದಲ್ಲಿ ತುಂಗಮ್ಮ ಬಲು ಎಚ್ಚರದಿಂದ ವರ್ತಿಸುತಿದ್ದಳು.

ಅವನು ಇಲ್ಲದೆ ಇದ್ದಾಗ ಹೊಯ್ದಾಡುತಿದ್ದ ಮನಸ್ಸು ಅತ ಬಂದೊಡನೆ

ಸಿಮಿತಕ್ಕೆ ಬರುತಿತ್ತು. ಅವನೆದುರು ಯಾವ ರೀತಿಯ ಮನೋವಿಕಾರ

ಗಳನ್ನೂ ಅಕೆ ತೋರಿಸುತ್ತಿರಲಿಲ್ಲ ಸೋಮಶೇಖರನೂ ಅಷ್ಟೆ. ಬಾಹ್ಯ

ಗಾಂಭೀರ್ಯದ ಪ್ರದರ್ಶನದಲ್ಲಿ ತುಂಗಮ್ಮನಿಗಿಂತಲೂ ಆತ ಒಂದು ಗುಲ

ಗಂಜಿಯಷ್ಟು ತೂಕ ಹೆಚ್ಚೇ ಎನ್ನ ಬೇಕು

ಒಂದು ವಾರದ ಹಿಂದೆಯೇ ಬಡವರ ಹುಡುಗಿ ಲಲಿತಾ ಅಸ್ಪತ್ರೆಯಿಂದ

ಹೋಗಬೇಕಾಗಿತ್ತು. ಆದರೆ ಸೋಮಶೇಖರ ಡಾಕ್ಟರಿಗೆ ಹೇಳಿ ಮತ್ತೂ

ಒಂದು ವಾರ ಆಕೆ ಅಲ್ಲಿರುವಂತೆ ಮಾಡಿದ ವಾಪ! ಆ ಅಭಯಧಾಮದಲ್ಲಿ

ಒಳ್ಳೆಯ ಆರೈಕೆ ಹೇಗೆ ಸಾಧ್ಯವಾಗಬೇಕು? ರೋಗಿ ಒಂದು ವಾರ ಇನ್ನೂ

ಆಸ್ಪತ್ರೆಯಲ್ಲೇ ಇರಲೆಂದು ಸೋಮಶೇಖರ ಕೇಳಿದಾಗ ದೊಡ್ಡಡಾಕ್ಟರು

ಹಾಗೆಯೇ ಆಗಲೆಂದು. ಆದರೆ ಹೌಸ್ ಸರ್ಜನ್ ನಾಗರಾಜ ನಕ್ಕು

ಕೀಟಲೆ ಮಾಡದಿರಲಿಲ್ಲ.

"ಇದೇನು ರೊಮಾನ್ಸ ಸೋಮೂ? ಇದೆಲ್ಲಿ ಆಂಟ್ಕೊಂಡ್ತೊ

ನಿಂಗೆ?"