ಪುಟ:Abhaya.pdf/೩೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಅಭಯ"

೩೦೦

ಸೋಮಶೇಖರ ಮಾತ್ರ ನಾಗರಾಜನಿಗೂ ತನ್ನ ಮನೋಗತವನ್ನು
ಹೇಳಿರಲಿಲ್ಲ. ಇನ್ನೂ ಒಂದು ವಾರ ಇರುವುದೆಂದಾಗ ಲಲಿತೆಯೂ ನಕ್ಕಳು.
" ತುಂಗಕ್ಕ, ಇವರೆಲ್ಲಾ ಏನು ತಿಳ್ಕೊಂಡಿದಾರೆ ಗೊತ್ತೊ ?"
" ಏನು ?"
" ಸೋಮಶೇಖರ್ ನನ್ನ ಪ್ರಿತಿಸ್ತಾರೆ ಅಂತ."
ಆ ಉತ್ತರ ಕೇಳಿ ತುಂಗಮ್ಮನಿಗೆ ಹೇಗೆ ಹೇಗೋ ಆಯಿತು. ಮುಖದ
ಚರ್ಯೆಗಳನ್ನು ಮುಚ್ಚಿಕೊಳ್ಳಲೆಂದು ನಗುತ್ತ ಆಕೆ ಅಂದಳು :
" ಯಾರಂದರು ಹಾಗೆ ?"
" ಆ ಕ್ರಿಶ್ಚಿಯನ್ ನರ್ಸ್ ಇದಾಳಲ್ಲಾ ಹೊಸಬಳು- ಬೆಳ್ಳಗೆ- ಕುಳ್ಳಿ ?"
" ಅವಳು ಹಾಗಂದ್ಲೆ ?"
" ಹೂಂ. ಡಾಕ್ಟರ್ ನಾಗರಾಜರೋ ಯಾರೋ ಹಾಗೆ ಮಾತ
ನಾಡ್ತಿದ್ರಂತೆ."
" ನೀನು ಏನಂದೆ ಅದಕ್ಕೆ ?"
ತಡೆಯಲಾರದೆ ತುಂಗಮ್ಮ ಆ ಪ್ರಶ್ನೆ ಕೇಳಿದ್ದಳು. ಮರುನಿಮಿಷವೇ
ಉತ್ತರ ಬಂದರೂ ನಡುವೆ ಒಂದು ಯುಗವೇ ಕಳೆದಹಾಗೆ ಆಕೆಗೆ ತೋರಿತು.
" ನಾನಂದೆ : ಆ ಭಾಗ್ಯ ನನ್ನದಲ್ಲ- ಅಂತ "
ತುಂಗಮ್ಮ ಮಾತನಡಲಿಲ್ಲ.
ಸ್ವರವಿಳಿಸಿ ಲಲಿತಾ ಪಿಸುಮಾತಿನಲ್ಲೆ ಅಂದಳು :
"ಅವರೇನಾದರೂ ಹೇಳಿದರೆ ಅಕ್ಕ ?"
ತುಟಿಬಿಚ್ಚದೆಯೆ ತುಂಗಮ್ಮ ಇಲ್ಲವೆಂದು ತಲೆಯಾಡಿಸಿದಳು.
....ಅಂತೂ ಲಲಿತಾ ಹೊರಡುವ ದಿನ ಗೊತ್ತಾಯಿತು. ಅದಕ್ಕೆ
ಹಿಂದಿನ ದಿನ ನಂಜೆ ಆಸ್ಪತ್ರೆಗೆ ಬಂದ ಸೋಮಶೇಖರ, ಇತರ ದಿನಗಳಿಗಿಂತ
ಭಿನ್ನವಾಗಿ ಮೌನವಾಗಿದ್ದ.
ಆತ ಮಂಚದ ಬಳಿ ಇದ್ದಾಗ ಲಲಿತ ಹೇಳಿದಳು :
" ನಿಮ್ಮಿಂದ ತುಂಬ ಉಪಕಾರವಾಯ್ತು ಸಾರ್. ನಾಳೆ ಹೊರಟ್ಹೋ
ಗ್ತೀನಿ. ಇನ್ನು ನಿಮ್ಮನ್ನು ಕಾಣ್ತೀನೋ ಇಲ್ವೊ ?"