ಪುಟ:Abhaya.pdf/೩೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

'

ಅಭಯ

೩೦೧

  ಘಾಟಿ ಹುಡುಗಿ. ನಿರಾಶೆಯಧ್ವನಿ ಬರಿಯನಟನೆ ಕಣ್ಣುಗಳಲ್ಲಿ ತುಂಟತನ ಮಿಂಚುತಿತ್ತು.
  ಆದರೆ ಸೋಮಶೇಖರ ವಿಮನಸ್ಕನಾಗಿದ್ದ. ಅವನಿಗೇನೂ ಅರ್ಥವಾಗಲಿಲ್ಲ.
  " ಯಾಕೆ ? ಅಭಯಧಾಮಕ್ಕೆ ಬಂದಾಗ ನಿಮ್ಮನ್ನ ಕಾಣ್ತೀನಲ್ಲ."
  " ಓ ! ಅಭಯಧಾಮಕ್ಕೆ ಬರ್ತಾನೇ ಇರ್ತೀರೇನು ?"
  ಆ ಪ್ರಶ್ನೆಯ ಜತೆಯಲ್ಲೆ ಅಣಕಿಸುವ ನಗುವಿತ್ತು. ಈಗ ಸೋಮಶೇಖರ ಎಚ್ಚರಗೊಂಡ ಅವನ ಮುಖ ಕೆಂಪೇರಿತು
  ಆ ಸಂಭಾಷಣೆ ತುಂಗಮ್ಮನಿಗೆ ಬಲು ಪ್ರಿಯನಾಗಿ ಕಂಡಿತು.
  ಆ ಸಂಜೆ ಆತ ಸೈಕಲು ತಂದಿರಲಿಲ್ಲ. ಆಸ್ಪತ್ರೆಯ ಹೆಬ್ಬಾಗಿಲು ದಾಟ್ಟುತ್ತ ಅವನೆಂದ :
  " ನಡಕೊಂಡು ಹೋಗೋಣವೆ ?"
  ಆಕೆ ಬೇಡವೆನ್ನಲಿಲ್ಲ ಇಬ್ಬರೂ ಬೀದಿಯುದ್ದಕ್ಕೂ ನಡೆದರು. ತುಂಗಮ್ಮನ ಎದೆ ಡವಡವನೆ ಹೊಡೆದುಕೊಂಡಿತು. ಗುರುತಿನವರು ಈಗ ಯಾರಾದರೂ ತಮ್ಮನ್ನು ಕಂಡರೆ ? ಮಾವಳ್ಳಿ ಮನೆಯವರು ? ಅಥವಾ ತುಮಕೂರಿನವರು ಯಾರಾದರೂ?
  ದೀಪಗಳು ಹತ್ತಿಕೊಂಡು, ಇನ್ನು ಕತ್ತಲು- ಎಂದು ಸೂಚಿಸಿದುವು.
  ಸೋಮಶೇಖರ, ನಡೆಯುತ್ತಲಿದ್ದ ತುಂಗಮ್ಮನ ವಾದಗಳನ್ನ ದಿಟ್ಟಿಸಿ ಹೇಳಿದ :
  " ನೀವು ಚಪ್ಪಲಿ ಯಾಕ್ರಿ ಹಾಕ್ಕೊಳ್ಳೊಲ್ಲ ?"
  " ಅಭಯಧಾಮದಲ್ಲಿ ದೊಡ್ಡಮ್ಮನ್ನ ಬಿಟ್ಬಿಟ್ಟು ಬೇರೆ ಯಾರೂ ಹಾಕ್ಕೊಳ್ಳೊಲ್ಲ"
  " ಸಹಾಯಿಕೇನೂ ಹಾಕ್ಕೋಬಾರದೂಂತ ನಿಯಮ ಇದೆಯೇನು ?"
  " ಛೆ ! ಛೆ ! ನಾನು ಏನುಬೇಕಾದರೂ ಕೊಂಡ್ಕೋಬಹುದೂಂತ ದೊಡ್ಡಮ್ಮ ಹೇಳಿದಾರೆ. ನಾನೆ ಬೇಡ ಅಂತ ನುಮ್ಮನಿದೀನಿ."
  ಸೋಮಶೇಖರನಿಗೆ ಅರ್ಥವಾಯಿತು. ಅದು ಜಿಪುಣತನವಾಗಿರಲಿಲ್ಲ.