"ನನ್ನ ವಿಷಯ ಪೂರ್ತಿಯಾಗಿ ನಿಮಗೆ ಗೊತ್ತೆ?"
"ಗೊತ್ತು ಎಲ್ಲಾ ಗೊತ್ತು ಅವನ್ನು ಮರೆತು ಬಿಡು."
ತುಂಗಮ್ಮನಿಗೆ ಮತ್ತೆ ಅಳು ಬಿಕ್ಕಿ ಬರುವಂತಾಯಿತು.
"ತುಂಗಾ! ಇದು ಆರ್ಧವಿಲ್ಲದ ಹಿಂಸೆ.ಯಾಕೆ ಮಾತಾಡ್ದೆ ನಿಂತಿ
ದೀಯ ನೀನು?"
"ಏನು ಹೇಳಿ?"
"ದೊಡ್ಡ ಮ್ಮನ ಕೈಲಿ ಮಾತಾಡ್ಲಾ?"
"ಹೂಂ......"
"ನಿಮ್ಮ ತಂದೆಗೆ ಕಾಗದ ಬರೆದು ಕರಿಸ್ತೀಯಾ?
"ಹೂಂ...."
ಸೋಮಶೇಖರ ಮತ್ತೋಮ್ಮೆ ತುಂಗಮ್ಮನ ಅಂಗೈಯನ್ನು ಅದುಮಿದ.
ಆತ ಅಭಯಧಾಮದ
ಬಾಗಿಲವರೆಗೂ ಬರಲಿಲ್ಲ.
ಕದತೆರೆದು ತುಂಗಮ್ಮನನ್ನು ಒಳಕ್ಕೆ ಬಿಟ್ಟ ಸರಸಮ್ಮ ಕೇಳಿದರು:
"ಬಸ್ಸು ಸಿಗಲಿಲ್ವೇನೆ ?"
"ಇಲ್ಲ ದೊಡ್ಡಮ್ಮ."
ಪ್ರೀತಿ-ಪ್ರೇಮಗಳ ಸಂಬಂಧದಲ್ಲಿ ಇಂತಹ ಸುಳ್ಳುಗಳ ನರಮಾಲೆ
ಹೊರಡುವುದು ಎಷ್ಟು ಸ್ವಾಭಾವಿಕ-ಸುಲಭ!
"ನಡುಕೊಂಡೇ ಬಂದಿಯಾ?"
"ಹೂಂ."
"ಒಬ್ಬಳೇ?"
ಆಗ ತುಂಗಮ್ಮ ಸುಳ್ಳಾಡಲಿಲ್ಲ ಅವಳೆಂದಳು:
"ಸುಂದರಮ್ಮನ ತಮ್ಮ ಬಂದಿದ್ದರು ಇಷ್ಟು ದೂರ."
ಆತನ ಹೆಸರು ಹೇಳಿದರೆ ಮುಖವೆಲ್ಲಿ ಕೆಂಪಾಗುವುದೋ ಎಂದು
ಅಂಜಿ ಹುಡುಗಿ.'ಸುಂದರಮ್ಮನ ತಮ್ಮ' ಎಂದಳು.
ಸ್ವಲ್ಪ ತಡೆದು ಸರಸಮ್ಮ ಕೇಳಿದರು:
ನಾಳೆ ಎಷ್ಟು ಹೊತ್ತಿಗೆ ಲಲಿತಾನ ಡಿಸ್ ಛಾರ್ಜ್ ಮಾಡ್ತಾರೆ?"
"ಬೆಳಿಗ್ಗೆ."
ಪುಟ:Abhaya.pdf/೩೦೯
ನ್ಯಾವಿಗೇಷನ್‌ಗೆ ಹೋಗು
ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೨೦೩
ಅಭಯ
