ಪುಟ:Abhaya.pdf/೩೧೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪರಿಶೀಲಿಸಲಾಗಿದೆ
೩೦೭
ಅಭಯ

ಸರಸಮ್ಮ, ಇನ್ನು ಸೋಮಶೇಖರನ ಪ್ರಸ್ತಾಪ ಬರುವುದೇನೋ
ಎಂದು ಮತ್ತೆ ಆಸೀನರಾದರು.ಆದರೆ ಮುಂದಿನ ಮಾತು ಕೇಳಿದಾಗ
ಅವರಿಗೇ ಆಶ್ಚರ್ಯವಾಯಿತು
"ನೋಡಿ ಸರಸಮ್ಮ,ನಮ್ಮ ಅಭಯಧಾಮದಿಂದ ಯಾವ
ಪ್ರಯೊಜನವೂ ಇಲ್ಲಾಂತ ಯಾರೋ ಅವಪ್ರಚಾರ ಮಾಡ್ತಿದ್ದಾರೆ."
__ಎಂದು ಕಾರ್ಯದರ್ಶಿ ಕಮಲಮ್ಮ ಹೇಳಿದರು.
"ಎಲ್ಲಿ?ಯಾರು"
ಉತ್ತರ ರೂಪವಾಗಿ ಸುಂದರಮ್ಮನೆಂದರು:
"ಯಾರಾದರೇನು?ಒಬ್ಬ ಎಕ್ಸ್ ಎಂದಿಟ್ಟು ಕೊಳ್ಳೋಣ. ಆತನ
ವಾದದ ಪ್ರಕಾರ,-ಸಮಾಜದಲ್ಲಿ ಹೆಣ್ಣುಗಂಡಿಗೆ ಸಂಬಂಧಿಸಿದ ಅನೀತಿ
ಅಧರ್ಮ ಎಷ್ಟೊಂದಿಲ್ಲ? ಅದನ್ನೆಲ್ಲಾ ಇಂಧ ಒಂದೆರಡು ಅಭಯಧಾಮ
ಗಳಿಂದ ಪರಿಹಾರ ಮಾಡೋಕೆ ಆಗುತ್ತೇನು?ನಮಗಂತೂ ಆತನ ಜತೇಲಿ
ವಾದಿಸಿ ಸಾಕಾಯ್ತು ನೀವೇನು ಉತ್ತರ ಕೊಡ್ತೀರೋ ಹೇಳಿ."
"ಪರಿಹಾರವೆಂದರೇನು' ನಮ್ಮ ಕೈಯಿಂದ ಎಷ್ಟಾಗುತ್ತೋ ಅಷ್ಟು
ನಾವು ಮಾಡ್ತೀವಿ."
"ಅಷ್ಟನ್ನ ಎಲ್ಲರೂ ಮಾಡ್ತಾರೆ. ಆ ಉತ್ತರಸಾಲದು. ಈಗ, ರಾತ್ರೆ
ಯಾವತ್ತಾದರೂ ಸಾಮಾನ್ಯ ಪೋಲೀಸರು ನಾಲ್ಕಾರು ಹುಡುಗೀ‍‍ರ್ನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ ಅಟ್ಟ
ಸ್ಕೊಂಡು ಅಭಯಧಾಮದ ದೊಡ್ಡಿಗೆ ಸೇರಿಸ್ತಾರೆ ಅಲ್ವೆ?"
ಆ ಮಾತುಕತೆ ಸ್ವಾರಸ್ಯವಾಗಿತ್ತು ಸುಂದರಮ್ಮ ಉತ್ಸಾಹದಲ್ಲಿದ್ದರು.
ಆ ಉತ್ಸಾಹ ಅಂಟುಜಾಡ್ಯದ ಹಾಗೆ ಸರಸಮ್ಮನವರಿಗೂ ತಗಲಿಕೊಂಡಿತು.
"ಹೌದು, ಸೇರಿಸ್ತಾರೆ. ನಾವು ಆ ಹುಡುಗಿರ್ನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ ಸುಧಾರಿಸೋಕೆ ನೋಡ್ತೀವಿ."
"ಅದಲ್ರೀ! ಈ ಪೋಲೀಸ್ನೋರು ಕಿರೀಪೇಟೆ ಹಿರೇಪೇಟೆ ದೊಡ್ಡ
ದೊಡ್ಡ ಹೊಟ್ಲುಗಳಲ್ಲಿ ಬಾಡಿಗೆಗೆ ಸಿಗೋ ಹುಡುಗೀ‌‍ರ್ನ್‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍‍ ಯಾಕೆ
ಹಿಡಕೊಂಡು ಬರೊಲ್ಲ?"
ಸರಸಮ್ಮ ಮುಗುಳ್ನಕ್ಕರು.ಆ ದೇಹದ ಮಾರಾಟದ ವಿಷಯ
ಅವರಿಗೆ ಗೊತ್ತಿತ್ತು. ನಗರದ 'ಗಣ್ಯರು'ಕೆಲವರು ಅಂಥ ಏರ್ಪಾಟನ