ಹಿಂದಿರುವುದನ್ನೂ ಹಿರಿಯ ಪೋಲೀಸ್ ಅಧಿಕಾರಿಗಳೇ ನೋಡಿಯೂ
ನೂಡದಂತೆ ನಮ್ಮನಿರುವುದನ್ನೂ ಅವರು ತಿಳಿದಿದ್ದರು.
"ಅದು ನಮ್ಮ ಕೈಲಿಲ್ವಲ್ಲಾ!"
"ಸರಿ. ಅದು ನಮ್ಮ ಕೈಲಿಲ್ಲ. ಸೂಳೆಯರ ಮನೆಗಳು ಇಲ್ಲದಂತೆ
ಮಾಡುವುದೂ ನಮ್ಮ ಕೈಲಿಲ್ಲ ತಾನೆ? ವೈಭಿಚಾರಕ್ಕೆ ಕಾರಣವಾಗೋ
ವಿಷಯ ದಾಂಪತ್ಯಗಳನ್ನು ಬಗೆ ಹರಿಸುವುದೂ ನಮ್ಮ ಕೈಲಿಲ್ಲ. ನಮ್ಮ
ಹುದುಗೀರು ಹಾದಿ ತಪ್ಪೋದಕ್ಕೆ ಆರ್ಥಿಕ ಸಮಾಜಿಕ ಕಾರಣಗಳಿವೆ.
ಜೀವನದ ಸರಿಯಾದ ಮೌಲ್ಯಗಳನ್ನು ಪ್ರತಿವಾದಿಸಲಾರದ ವಿದ್ಯಾಭ್ಯಾಸ
ಪದ್ದತಿಯಿದೆ.ನಮ್ಮ ನೈತಿಕ ಮಟ್ಟ ಮತ್ತಷ್ಟು ಕೆಳಗೆ ಇಳಿಯೋಕೆ
ಕಾರಣವಾಗೋ ಕೆಟ್ಟ ಚಲಚಿತ್ರ ಕೆಟ್ಟ ಪುಸ್ತಕಗಳಿವೆ ಗೊತ್ತುಗುರಿಇಲ್ಲದ
ನಂಬುಗೆಶ್ರದ್ದೆ ಇಲ್ಲದ ಬದುಕು ಯಾವಾಗಲೂ ಛಿದ್ರವಾಗುತ್ತೆ-ಅಲ್ವೆ?"
"ಹೌದು?"
"ಹಾಗಾದರೆ ಆ ಮೂಲ ಕಾರಣಗಳ್ನ ಮೊದಲು ಹೋಗಲಾಡಿಸಿ-
ಅಂತಾನೆ ಆತ."
"ಅದು ನಮ್ಮ ಕೈಲಿದೆಯೆ?ಆ ಕೆಲಸ ಸರ್ಕಾರ ಮಾಡ್ಬೇಕು;
ಜನರು ಮಾಡ್ಬೇಕು....ಸಮಾಜದ ಪುನರ್ಘಟನೆ ದೊಡ್ಡವಿಷಯನಾಯ್ತು."
"ಹಾಗಾದರೆ,ಎಲ್ಲಿಯೋ ಸಿಕ್ಕಿದ ಯಾವುದೋ ಹುಡುಗಿ ಒಬ್ಬಳ್ನ
ಸುಧಾರಿಸಿ ಏನ್ರೀ ಬರೋದು?
"ನಮ್ಮ ಕೈಲಿ ಎಷ್ಟಾಗುತ್ತೋ ಅಷ್ಟನ್ನು ಮಾಡ್ತೀವಿ"
"ಪುನಃ ಅಲ್ಲಿಗೇ ಬಂತು ಚಕ್ರ!_"
ಒಳಗೆ ಯಾರೋ ಬಂದರೆಂದು ಸುಂದರಮ್ಮ ಮಾತು ನಿಲ್ಲಿಸಿದರು.
ಬಂದವನು ತೆಳು ನೀಲಿಯ ಉಣ್ಣೆಯ ಪ್ಯಾಂಟನಮೇಲೆ ಚಕಚಕಿಸುವ
ಬಿಳಿಯ ಲಿನನ್ ಬುಷ್ ಷರ್ಟು ತೋಟ್ಟುಕೊಂಡಿದ್ದ,ಸೋಮಶೇಖರ.
ಬಂದವನೇ,"ಓ!" ಎಂದ."ಇನ್ನೂ ಮುಗ್ಡೇಇಲ್ವಾ ನಿಮ್ಮ
ಸಭೆ?"
ಹೊರಡಲೆಂದು ಹಿಂದಕ್ಕೆ ತಿರುಗಿದವನನ್ನು ಕಮಲಮ್ಮ
ಕರೆದರು "ಇಲ್ಲಿ ಬನ್ನಿ ಮಿ ಸೋಮಶೇಖರ್-ಒಂದ್ನಿಮಿಷ."