ಪುಟ:Abhaya.pdf/೩೧೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೩೧೩
ಅಭಯ

ಆ ಸಂದರ್ಭದಲ್ಲಿ ಅಭಯಧಾಮದ ಪ್ರತಿಯೊಬ್ಬರಿಗೂ ಒಂದೊಂದು ಒಳ್ಳೆಯ
ಸೀರೆ, ರವಿಕೆ ಕಣ, ಮತ್ತು ತಮಗೆ ಬೇಕಾದ ಒಂದೊಂದು ಜತೆ ಚಪ್ಪಲಿ
ಗಾಗಿ ಐದೈದು ರೂಪಾಯಿ ಕೊಟ್ಟರು.
ಹುಡುಗಿಯರು ತಾವು ಹೊಲಿದಿದ್ದ ಚಾಪೆ, ಸೀರೆ, ಶಾಲುಗಳನ್ನು
ವಧೂವರರಿಗೆ ಓದಿಸಿದರು.
ಆದರೆ ಜಲಜ-ಲಲಿತ-ಸಾವಿತ್ರಿಯರೇನನ್ನೂ ಕೊಡಲಿಲ್ಲ. ಅದು
ಅವರ ಅಕ್ಕನ ಮದುವೆಯಾಗಿತ್ತಲ್ಲವೇ? ಸರಸಮ್ಮನೂ ಉಡುಗೊರೆ ಕೊಡ
ಲಿಲ್ಲ. ಅದು ಅವರ ಮಗಳ ಮದುವೆಯಾಗಿತ್ತಲ್ಲವೇ?
ವಧು ಗಂಡನ ಮನೆಗೆ ಹೊರಡುವ ಮಾತು.
ಸೋಮಶೇಖರ ತುಂಗಮ್ಮನೊಡನೆ ಆಫೀಸು ಕೊಠಡಿಗೆ ಬಂದ. ಆತನ
ಅಪೇಕ್ಷೆಯಂತೆ ತುಂಗಮ್ಮ ಹೊಸ ಷೀಫಾನ್ ಸೀರೆಯುಟ್ಟಿದ್ದಳು. ಆಧು
ನಿಕ ಬ್ಲೌಸು ತೊಟ್ಟಿದ್ದಳು. ಕಿವಿಗೆ ಓಲೆ, ಕತ್ತಿಗೆ ಸರ, ಕೈಗೆ ಬಳೆ. ಅರ
ಳಿದ ಮನಸ್ಸು-ಚಿಗುರಿದ್ದ ದೇಹ...ಲಾವಣ್ಯವತಿಯಾಗಿದ್ದಳು ತುಂಗಮ್ಮ.
ಸುಮಾರು ಒಂದು ವರ್ಷದ ಹಿಂದೆ ಆಶ್ರಯ ಯಾಚಿಸಿಕೊಂಡು ಬಂದಿದ್ದ
ಮುದುಡಿದ ಬಾಡಿದ ತುಂಗಮ್ಮನಾಗಿರಲಿಲ್ಲ ಈಕೆ.
ಬೀಳ್ಕೊಡಿರೆಂದು ಕೇಳಲು ಬಂದಿದ್ದಾಳೆ ಹುಡುಗಿ-ಎಂದುಕೊಂಡರು
ಸರಸಮ್ಮ.
"ಏನಮ್ಮ ತುಂಗ, ಹೋಗ್ತೀಯಾ?"
"ಇವತ್ತು ಹೋಗ್ತೀನಿ ನಾಳೆಯೇ ಬಂದುಬಿಡ್ತೀನಿ
ದೊಡ್ಡಮ್ಮ."
ಸರಸಮ್ಮನಿಗೆ ಅರ್ಥವಾಗಲಿಲ್ಲ ಆಶ್ಚರ್ಯವಾಯಿತು.
"ಅಂದರೆ?"
"ಅಮ್ಮ, ನೀವೇನೂಂತ ತಿಳಕೊಂಡಿದ್ರಿ? ತುಂಗ ನಿಮ್ಮನ್ನ ಬಿಟ್ಬಿಟ್ಟು
ಹೋಗ್ತಾಳೇಂತ ಅಲ್ವೇ?"
-ಹಾಗೆ ಕೇಳಿದವನು ಸೋಮಶೇಖರ.
ಉತ್ತರ ಬರದೇ ಇದ್ದುದನ್ನು ಕಂಡು ಆತನೇ ಮಾತು ಮುಂದು
ವರೆಸಿದ:
"ನಾವಿನ್ನೂ ಮನೆಮಾಡೋದು ತಡ. ಆಮೇಲೇನೋ ಜತೇಲಿ

21