ಪುಟ:Abhaya.pdf/೩೧೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ
೩೧೪
ಅಭಯ

ಇರ್ತೀವಿ ಆದರೆ ಇಲ್ಲಿ ಸಹಾಯಿಕೆ ಆಧ್ಯಾಪಿಕೆ ಕೆಲಸಾನೆಲ್ಲಾ, ನೀವು
ಮಾಡು ಅನ್ನೋ ವರೆಗೂ ತುಂಗ ಮಾಡ್ತಾಳೆ. ಅಲ್ವೆ ತುಂಗ ?"
"ಹೌದು"
ತಮ್ಮ ಕಿವಿಗಳನ್ನೇ ತಾವು ನಂಬಲು ಸರಸಮ್ಮ ಸಿದ್ಧರಿರಲಿಲ್ಲ. ಆ
ಕೆಲವು ದಿನಗಳಲ್ಲಿ ನಿಜವಾದ ಸಂತೋಷದ ಅನುಭವ ಅವರಿಗೆ
ಆದುದು ಆಗ.
"ಇದಕ್ಕಿಂತ ಆಭಯಧಾಮಕ್ಕೆ ನೀವು ಮಾಡೋ ಉಪಕಾರ ಬೇರೆ
ಇಲ್ಲ ಸೋಮಶೇಖರ್"
_ಎಂದು ಅವರು ಹೃತ್ಪೂರ್ವಕವಾಗಿ ನುಡಿದರು
ಅಷ್ಟರಲ್ಲಿಯೇ ಜಲಜ ಲಲಿತೆಯರು ಬಂದರು ಲಲಿತ, ಕಾಹಿಲೆ
ಯಿಂದ ಎದ್ದಮೇಲೆ ಮೈತುಂಬಿಕೊಂಡಿದ್ದವಳು, ಬಾಗಿಲಲ್ಲೆ ನಿಂತಳು
ಜಲಜೆಯೊಬ್ಬಳೇ ಒಳಬಂದಳು ತುಂಟತನ ಕುಣಿಯತ್ತಲೆ ಇತ್ತು ಆಕೆಯ
ತುಟಿಗಳ ಮೇಲೆ
. "ದೊಡ್ಡಮ್ಮ, ನಾನೊಂದು ಮಾತು ಹೇಳ್ಬಹುದೇ?"
ಇದೇನೋ ತಮಾಷೆಯ ವಿಷಯವೆಂಬ ಕೊರಡಿಯಲ್ಲಿದ್ದ ಮೂವ
ರಿಗೂ ಹೊಳೆಯದೆ ಇರಲಿಲ್ಲ
"ಹೇಳು, ಅದೇನು ?"
__ಎಂದು ನಗಲು ಸಿದ್ದರಾಗುತ್ತ ಅಂದರು ಸರಸಮ್ಮ
" ಗಂಡನ ಮನೆಗೆ ಹೋದಮೇಲೆ ಹುಡುಗಿಗೆ ಬೇರೆ ಹೆಸರು ಇಡ್ತಾರೆ
ಅಲ್ವೆ?"
"ಹೂಂತ. ಹೌದು ...."
"ಈಗ ನಮ್ಮ ಈ ಭಾವನವರು ತಮ್ಮ ಹೆಂಡತೀಗೆ ಒಳ್ಳೇ
ಹೆಸರಿಡ್ಬೇಕೂಂತ ....."
ಸೋಮಶೇಖರನಿಗೆ ನಗುಬಂತು.
" ಆದೇನು ಹೆಸರು ಬೇಕೋ ನೀವೇ ಹೇಳಿ "
__ಎಂದು ಆತ ಜಲಜ ಲಲಿತೆಯರತ್ತ ನೋಡಿದ
ಜಲಜ ಅಂದಳು: