ಪುಟ:Abhaya.pdf/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೩೧೫

"ಪ್ರೇಮಲತಾನೋ ಪುಷ್ಪಲತನೋ___ "

ಜಲಜೆಯ ಉತ್ತರಕೇಳಿ " ಧೂ!" ಎಂದಳು ತುಂಗಮ್ಮ. ಆಕೆಗೆ ಓಮ್ಮೆಲೆ ಓಂದು ವರ್ಷದ ಹಿಂದಿನ ನಾನವಯಿತು ಬಂದ ಆರಂಭದಲ್ಲಿ ಜಲಜ ಹೇಳಿದ್ದಳು:'ನಿಮ್ಮ ಹೆಸರು ಪ್ರೇಮಲತಾನೋ ಪುಷ್ಪಲತಾನೋ ಇರಬಹುದೊಂತಿದ್ದೆ'

"ಆದರೆ ನನಗೇನೋ ತುಂಗಮ್ಮ ಅನ್ನೋ ಹೆಸರೇ ಬಹಳ ಇಷ್ಟ"

__ಎಂದ ಸೋಮಶೇಕರ

ಗಂಡನ ಮಾತು ಕೇಳಿ ತುಂಗಮ್ಮ ತನೆಗ ನಾಚಿಕೆಯಾಯಿತೆ೦ದು ತೋರಿಸಿಕೊಂಡಳು

...............

ಸಂಜೆಯಾದಮೇಲೆ ತುಂಗಮ್ಮ ವಂದು ದಿನಮಟ್ಟಿಗೆ ಪತಿಗೃಹಕ್ಕೆ

ಹೊರಟಳು ಪುಟಕೋಸುಕಾರಿ ಬದಲು ಒಳ್ಳೆ ಕುದುರೆಯನ್ನು ಹೂಡಿದ್ದ

ಜಟಕಾಗಾಡಿ ನಿಂತಿತ್ತು.

ಹುಡುಗಿಯರೆಲ್ಲ ಆಫೀಸು ಕೊಠಡಿಯ ಕಿಟಕಿಯ ಎಡೆಯಿಂದಲೂ ಬಾಗಿಲಬಳಿಯೂ ನಿಂತು ಬೀಳ್ಕೊಟ್ಟರು. ಸರಸಮ್ಮ, ಜಲಜ, ಲಲಿತ ಮತ್ತು ಸಾವಿತ್ರಿ ಬೀದಿಯವರೆಗೂ ಬಂದರು.

ಗಾಡಿಯನ್ನೇರಲು ಹೊರಟ ತುಂಗಮ್ಮನನ್ನು ತಡೆದು ಜಲಜ

ಕೇಳಿದಳು:

"ಅಕ್ಕ, ನನ್ನದೊಂದು ಮಾತಿದೆ. ಆಗೋಲ್ಲ ಅನ್ಬೇಡ. ದಯವಿಟ್ಟು

ನಡೆಸ್ಕೊಡು."

"ಅದೇನೇ ?"

"ಅಕ್ಕ, ನಿನ್ನ ಊಟದ ತಟ್ಟೀನ ನನಗೆ ಕೊಡೋಹಾಗೆ ದೊಡ್ದಮ್ನಿಗೆ ಹೇಳು."

ಎಲ್ಲರಿಗೂ ಆದು ಕೇಳಿಸಿತು. ಅರ್ಥವಾಗದೆ ಇದ್ಧ ಸೋಮಶೇಖರನ ಹೊರತಾಗಿ ಉಳಿದವರೆಲ್ಲರೂ ನಕ್ಕರು.

ತಂಗಮ್ಮನ ಮುಖ ಕೆಂಪು ಕೆಂಪಗಾಯಿತು.

ಅದೇನು? ಅದೇನು?"