ಈ ಪುಟವನ್ನು ಪ್ರಕಟಿಸಲಾಗಿದೆ
ಅದು ಕಳೆಯುತ್ತಲೆ ಆಕೆ ಬಾಗಿಲು ಬಡೆದಳು.
"ಅಮ್ಮಾ! ಅಮ್ಮಾ!"
ಮತ್ತೆ ಬಾಗಿಲಿನ ಬಡೆತ.
"ಅಮ್ಮಾ! ಅಮ್ಮಾ!"
ಕತ್ತಲಿನ ವಾತಾವರಣದಲ್ಲಿ ಆ ಸ್ವರವೇ ಪ್ರತಿಧ್ವನಿಸಿತು:
"ಅಮ್ಮಾ! ಅಮ್ಮಾ!"
ಭದ್ರವಾಗಿದ್ದ ಆ ಬಾಗಿಲ ಮೇಲೆ ಮುಷ್ಟಿ ಬಿಗಿದಿದ್ದ ತನ್ನೆರಡೂ
ಕೈಗಳಿಂದ ತುಂಗಮ್ಮ ಬಡೆದಳು.
"ಅಮ್ಮಾ! ಅಮ್ಮಾ!"
ಉತ್ತರ ಬರಲಿಲ್ಲ.
ಬಿಗಿದ ಮುಷ್ಟಿಗಳು ಸಡಿಲಿದವು. ಎಲ್ಲ ಶಕ್ತಿಯೂ ತನ್ನನ್ನು ಬಿಟ್ಟು
ಹೋದ ಹಾಗೆ ಆಕೆಗೆ ಭಾಸವಾಯಿತು. ಕಣ್ಣುಗಳು ಮಂದವಾದುವು.
"ಅಮ್ಮಾ...." ಎಂದಳು ತುಂಗಮ್ಮ ಮತ್ತೊಮ್ಮೆ ಮೆಲ್ಲನೆ. ಆದರೆ
ಆ ಕರೆ ಆಕೆಗೇ ಕೇಳಿಸದಷ್ಟು ಕ್ಷೀಣವಾಗಿತ್ತು