ಪುಟ:Abhaya.pdf/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಒಳಗೆ ಹುಡುಗಿಯರು ಊಟಕ್ಕೆ ಕುಳಿತಿದ್ದರು ಊಟದ ಗದ್ದಲ

ವಿಪರೀತ. ಆಗ ಆಗದ ಜಗಳವಿಲ್ಲ

ಆ ಮಾತು, ಗುಜುಗುಜು, ಸದ್ದಿನ ನಡುವೆ, ಹೊರಗಿನಿಂದ ಕರೆದುದು

ಸರಸಮ್ಮನಿಗೆ ಕೇಳಿಸಲಿಲ್ಲ.

ತಮ್ಮ ಕೊಠಡಿಯಲ್ಲೇ ಇದ್ದರು ಸರಸಮ್ಮ. ಮೂಗಿನ ತುದಿಗೆ

ಕನ್ನಡಕವನ್ನೇರಿಸಿ, ಹಿಂದಿನ ದಿನ ಒಂದು ಪುಸ್ತಕವನ್ನು ಓದಿ ನಿಲಿಸಿದ ಭಾಗದಿಂದ ಮುಂದುವರಿಯಲು ಅವರು ಯತ್ನಿಸುತಿದ್ದರು

ಅವರ ಮಂಚದ ಸಮೀಪದಲ್ಲೆ ಕೆಳಗೆ ಹಾಸಿಗೆಯ ಮೇಲೆ

ಮಲಗಿದ್ದಳು ಜಲಜಾ-ಹದಿನೆಂಟರ ಹುಡುಗಿ ಅಭಯಧಾಮದಲ್ಲಿ ಆಗಲೆ ನಾಲ್ಕು ವರ್ಷಗಳನ್ನು ಕಳೆದಿದ್ದ ಆ ಹಳಬಳನ್ನು ಎರಡು ದಿನಗಳಿಂದ ನೆಗಡಿ ಕೆಮ್ಮು ಜ್ವರ ಬಾಧಿಸುತಿದ್ದವು ನಿದ್ದೆ ಬರದ ಆಕೆ ದಿಂಬಿಗೆ ಮುಖ ತಗಲಿಸಿ ಹಾಗೆಯೇ ಒರಗಿದ್ದಳು

....ಕಿಟಕಿಯಿಂದ ಹೊರಗಿಣಿಕಿ, ಸರಳುಗಳೆಡೆಯಿಂದ ತೂರಿ ಹೋಗಿ,

ಹೊರಗೆ ಅಂಗಳದಲ್ಲಿ ಸಂಚರಿಸುತಿತ್ತು ಆಕೆಯ ಮನಸ್ಸು....

ಅಮ್ಮಾ ಎಂಬ ಕರೆ, ಬಾಗಿಲ ಬಡಿತ, ಧೊಪ್ಪನೆ ಸದ್ದು....

"ದೊಡ್ಡ ಮ್ಮಾ!"

"ಏನೋ ಜಲಜಾ...?"

"ಹೊರಗೇನೋ ಸಪ್ಪಳವಾಯ್ತಲ್ವಾ?"

ಓದುತಿದ್ದ ವಾಕ್ಯದ ಮೇಲೆ ಬೆರಳಿನ ಗುರುತಿಟ್ಟು ಸರಸಮ್ಮ

ಮುಖವೆತ್ತಿ ನೋಡಿ ಕಿವಿ ನಿಗುರಿಸಿದರು.

"ಎಲ್ಲೇ?"

"ಹೊರಗೆ ದೊಡ್ಡಮ್ಮ, ಯಾರೋ ಬಂದಿದಾರೆ...."