ವಿಷಯಕ್ಕೆ ಹೋಗು

ಪುಟ:Abhaya.pdf/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಸಾವಿತ್ರಿ! ಲಲಿತಾ! ಬೇಗ್ಬನ್ರೇ....ಒಂದಿಷ್ಟು ನೀರು ತಗೊಂ

ಬನ್ನಿ!"

ಹುಡುಗಿಯರಲ್ಲಿ ದೊಡ್ಡವರಾದ ಸಾವಿತ್ರಿ ಲಲಿತಾ ಓಡಿಬಂದರು.

ಅವರ ಹಿಂದೆಯೇ ಗುಂಪು ಕಟ್ಟೊಕೊಂಡು ಹುಡುಗಿಯರ ಹಿಂಡೇ ಬಂತು. ಬೇರೆ ಸನ್ನಿವೇಶವಾಗಿದ್ದರೆ ಆ ತೆರೆದ ಬಾಗಿಲಿನೆಡೆಯಿಂದ ಹುಡುಗಿಯರು ದೂರ ದೂರಕ್ಕೆ ಹೊರನೋಡುತಿದ್ದರು. ಓಡಿ ಹೋಗುವ ಬಯಕೆಯೂ ಕೆಲವರಿಗೆ ಆಗದೆ ಇರುತ್ತಿರಲಿಲ್ಲ ಆದರೆ ಈಗ ಅವರ ದೃಷ್ಟಿಯೆಲ್ಲ ಬಾಗಿಲ ಬಳಿ ಮುದುಡಿ ಬಿದ್ದಿದ್ದ ಜೀವದ ಮೇಲಿತ್ತು.

ತಮ್ಮ ಹಾಗೆಯೇ ಇನ್ನೊಂದು ಹತಭಾಗ್ಯೆ ಹೆಣ್ಣು !

....ಹಾಗೆ ತುಂಗಮ್ಮನನ್ನು ಒಳಕ್ಕೆ ಹೊತ್ತು ತಂದರು.

ಬಾಗಿಲು ಮತ್ತೆ ಮುಚ್ಚಿಕೊಂಡು, ಬೀಗ ಅದಕ್ಕೆ ಕಾವಲು ಕುಳಿತಿತು.

ಅಸಹಾಯಸ್ಥಿತಿಯಲ್ಲಿ ಅಭಯದ ಆಸರೆಗಾಗಿ ಬಂದಿದ್ದ ತುಂಬು

ಗರ್ಭಿಣಿ...ಅಬಲೆಯಾದ ಹೆಣ್ಣನ್ನು ನೂರಾರು ರೀತಿಯಲ್ಲಿ ಕಂಡಿದ್ದರೂ ಸರಸಮ್ಮನ ಹೃದಯ, ಎಂದಿನಂತೆ ಈ ಸಾರೆಯೂ, ಕಾತರದ ಕಡಲಾಗಿ ಮಮತೆಯ ಒಸರಾಗಿ ಮಿಡುಕಿತು.

ಆಕೆ ತುಂಗಮ್ಮನಿಗೆ ಶೈತ್ಯೋಪಚಾರ ನಡೆಸಿದರು. ತುಂಗಮ್ಮ ಕಣ್ಣು

ತೆರೆದಳು. ಆಕೆಯ ಮುಗ್ಧ ದೃಷ್ಟಿ ಅಲ್ಲಿ ನೆರೆದಿದ್ದವರ ಮೇಲೆಲ್ಲ ಸುತ್ತಾಡಿ, ಯಾವುದನ್ನೂ ಗ್ರಹಿಸದೆ, ಮತ್ತೆ ಎವೆಗಳೆಡೆಯಲ್ಲಿ ಅಡಗಿಕೊಂಡಿತು.

ಮಲಗಿದ್ದಲ್ಲೆ ತುಂಗಮ್ಮ ನೀಳವಾದ ನಿಟ್ಟುಸಿರು ಬಿಟ್ಟಳು. ಆಕೆಯ

ದೇಹ ಚಲಿಸಿತು.

ಸರಸಮ್ಮ ಎದ್ದು, ಗುಂಪಾಗಿ ನಿಂತಿದ್ದ ಹುಡುಗಿಯರನ್ನೆಲ್ಲ ಕೈ ಬೀಸಿ

ಕಳುಹಿದರು.

"ಹೋಗ್ರೆ, ಹೋಗಿ....ಹಾಸಿಗೆ ಹಾಸ್ಕೊಳ್ಳಿ, ಹೋಗಿ...."

'ದೊಡ್ಡಮ್ಮ'ನ ಮಂಚದ ಮೇಲೆಯೆ ಮಲಗಿಸಿದ್ದರು ತುಂಗಮ್ಮ

ನನ್ನು. ಹೆಚ್ಚಿನ ಹುಡುಗಿಯರೆಲ್ಲ ಹೊರ ಹೋಗುತ್ತಲೆ ಸಾವಿತ್ರಿ ಕೇಳಿದಳು.

"ಈಕೆನ ಎಲ್ಲಿ ಮಲಗ್ಸೋಣ ದೊಡ್ಡಮ್ಮ?"

"ಈ ರೂಮ್ನನಲ್ಲೇ ಇರಲಿ ದೊಡ್ಡಮ್ಮಾ. ಇಲ್ಲೇ ಹಾಸಿ...."