ಪುಟ:Abhaya.pdf/೩೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

ತುಂಗಮ್ಮನ ದೃಷ್ಟಿ ಕೊಠಡಿಯ ಸುತ್ತಲೂ ಸಂಚಾರ ಮಾಡಿ, ಕೆಳಗೆ

ಮಲಗಿಕೊಂಡು ಸಿಳಿ ಪಿಳಿ ಕಣ್ಣು ಬಿಡುತ್ತ ತನ್ನನ್ನೆ ನೋದುತಿದ್ದ ಒಂದು ಸುಂದರ ಮುಖದ ಮೇಲೆ ತಂಗಿತು.

ಅದನ್ನು ನೋಡಿದ ಸರಸಮ್ಮನೆಂದರು:

"ಅವಳು ಜಲಜಾ. ಎರಡು ದಿವಸ್ದಿಂದ ಸ್ವಲ್ಪ ಜ್ವರ ಬಂದಿದೆ...."

ಜಲಜ ಮುಗುಳ್ನಕ್ಕಳು. ಕುದಿಯುತಿದ್ದ ತನ್ನ ಹೃದಯದ ಕಿಟಕಿಯನ್ನು ತೆರೆದು ತಣ್ಣನೆಯ ಗಾಳಿಯನ್ನು ಒಳಕ್ಕೆ ಬಿಟ್ಟು ಹಾಗಾಯಿತು ತುಂಗಮ್ಮನಿಗೆ.ಹಸಿದ ಆಕೆಗೆ ಮಧುರ ಸ್ನೇಹದೊಂದು ತುತ್ತನ್ನು ಜಲಜಳ ಮುಗುಳುನಗು ನೀಡಿತ್ತು

ಸರಸಮ್ಮ, ತಾನೂ ಮಂಚದ ಬದಿಯಲ್ಲೆ ಕುಳಿತುಕೊಳ್ಳುತ್ತ

ಹೇಳಿದರು:

"ಬಿದ್ದಾಗ ನೋವಾಯ್ತಾ?"

ತಾನು ಬಿದ್ದಿದ್ದೆ, ಅಲ್ಲವೆ? ತಾನು ಸದಾ ಕಾಲವೂ ಇಲ್ಲಿಯೆ ಈ

ಮಂಚದ ಮೇಲೆ ನಿದ್ದೆ ಹೋಗಿರಲಿಲ್ಲ ಹಾಗಾದರೆ, ಅಲ್ಲವೆ?....ತುಂಗಮ್ಮನ ಮೆದುಳಿನ ಪದರುಗಳು ಮತ್ತೆ ಜೀವನಕ್ಕೆ ಶ್ರುತಿಕೂಡಿಸಿದುವು....ಸಂಜೆ ಮಾವಳ್ಳಿಯ ಮನೆ ಬಿಟ್ಟು ಬಂದ ಹೊತ್ತಿನಿಂದ ಈವರೆಗೆ. ಅಭಯಧಾಮವನ್ನು ಹುಡುಕಿಕೊಂಡು ಬಂದಿದ್ದೆ ತಾನು.ಅಲ್ಲಿ ಬಾಗಿಲು ಬಡಿಯುತ್ತ ಬವಳಿ ಬಂದು ಬಿದ್ದಿದ್ದೆ....ತನ್ನನ್ನು ಎತ್ತಿಕೊಂಡು ಒಳಕ್ಕೆ ಬಂದು ಅವರು ಅಲ್ಲಿ ಮಲಗಿಸಿರಬೇಕು.

ತನಗೆ ಅಭಯ ದೊರೆತಿತ್ತು.

"ನೋವಾಯ್ತೆ ಬಿದ್ದಾಗ?"

ಮತ್ತೆ ಅದೇಪ್ರಶ್ನೆ. ನೋವಾಯಿತು ತನಗೆ. ಮೈ ಕೈ ನೋಯುತ್ತಿದೆ.

"ಆಂ....ಊಂ...."

ಅದು ನರಳಾಟ. ಗರ್ಭಕ್ಕೇನಾದರೂ ಧಕ್ಕೆ ತಗಲಿರಬಹುದೇ ಎಂಬ

ಭಯ ಸರಸಮ್ಮನಿಗೆ. ಆದರೂ ಸಂತತಿಡುವ ನುಡಿ ಸಲೀಸಾಗಿಯೇ ಬಂತು.

"ಅಷ್ಟೇನೂ ನೋವಾಗಿರೊಲ್ಲ. ಆಯಾಸ ಕಳೀಲಿ.ನಾಳೆಗೆ ಸರಿ

ಹೋಗ್ತೀಯಾ...."