ಪುಟ:Abhaya.pdf/೪೦

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

ನಾಳೆಯ ದಿನ ಸರಿಹೋಗುವ ಆಸೆ...

ನೋವುಗಳಿಗೆಲ್ಲ ಮತ್ತೂ ಮಾತನಾಡಿದರು ಸರಸಮ್ಮ.

"ಹಸಿವಾಗುತ್ತಾ ನಿಂಗೆ?"

ದಿಂಬು ಮೃದುವಾಗಿತ್ತು, ಹಾಸಿಗೆಯೂ ಮೃದು. ಬದುಕಿನ ಗುಂಯಾ

ರವದ ಹಾಗೆ ಮಾತುಗಳೂ ಮೃದುವಾಗಿದ್ದುವು. ನಾಲಿಗೆಯ ತೇವದಿಂದ ತನ್ನ ತುಟಿಗಳನ್ನು ತೀಡಿಕೊಂಡಳು. ತುಂಗಮ್ಮ.

"ಒಂದುಷ್ಟು ಗಂಜಿ ಕುಡಿ, ಹಿತವಾಗಿರುತ್ತೆ......?

"ಹೂ.......?

ಜಾಗೃತವಾದ ವಿಚಾರಶಕ್ತಿ ತುಂಗಮ್ಮನಿಗೆ ಹೇಳಿತು............ ಪ್ರಶ್ನೆಗಳು

ಬರಬಹುದಿಸ್ಸು ಹುಷಾಗಾರಿತು............ ಯಾರು ನೀನು? ಎಲ್ಲಿಯವಳು? ಯಾಕೆ ಹೀಗೆ?

ತುಂಗಮ್ಮ ನಿರೀಕ್ಷಿಸುತ್ತಲೇ ಇದ್ದಳು. ಆದರೆ ಯಾರೂ ಪ್ರಶ್ನೆ

ಕೇಳಲಿಲ್ಲ.

ಸರಸಮ್ಮ ಕೊಠಡಿಯಿಂದ ಹೊರಹೋದಳು. ತನ್ನನ್ನು ಬಿಟ್ಟು

ಹೋದರಲ್ಲೂ ಎಂದು ಕ್ಷಣಕಾಲ ಅಳುಕಿ ತುಂಗಮ್ಮ, ಜಲಜಳನ್ನು ದಿಟ್ಟಿಸಿದಳು. ಆರಿಹೋಗಿರಲೇ ಇಲ್ಲ ಆ ಹುಡುಗಿಯ ತುಟಿಗಳ... ಮೇಲಿದ್ದು, ಮುಗುಳುನಗು.

ಆ ನಗುವಿನ ಬೇಲಿಯೊಳಗಿಂದ ಮಾತು ಮುಖತೋರಿಸಿತು:

"ಹುಡುಗೀರನ ಮಲಗ್ಸೋಕೆ ಹೋದ್ರು ದೊಡ್ದಮ್ಮ......"

ವಯಸ್ಸಾದ ಆ ಒಳ್ಳೆಯವರು ಹಾಗಾದರೆ ಈ ಹುಡುಗಿಯ ದೊಡ್ಡಮ್ಮ

ನೀರಬೇಕು, ಅಲ್ಲವೇ? ಅದೇ ಹೆಸರಿನಿಂದ ಬೇರೆಯೂ ಯಾರೋ ಕರೆದರಲ್ಲ? ........... ಅನಂತರ ಯೋಚನೆಗಳು ಕಡಿದುಕಡಿದು ಬಂದುವು. ಆ ವಿಚಾರ ಸರಣಿಯಲ್ಲಿ ಕ್ರಮಬದ್ಧತೆಯೇ ಇರಲಿಲ್ಲ..........

ಮತ್ತು ಆಕೆಯನ್ನು ಜಲಜಳ ಪ್ರಶ್ನೆ ಭೂಮಿಗಿಳಿಸಿತು.

"ನಿಮ್ಮ ಹೆಸರೇನ್ರೀ?"

"ಹೂಂ......?"

"ನಿಮ್ಮ ಹೆಸರು"?