ಪುಟ:Abhaya.pdf/೪೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಭಯ

೩೯,

ಆ ದೃಷ್ಟಿಯ ಓಡಾಟವನ್ನು ಕಂಡ ಜಲಜ ತನ್ನ ತುಂಟ ಸ್ವರದಲ್ಲೆ

ಅಂದಳು:

"ದೊಡ್ಡಮ್ಮ, ಅಯ್ಯೋ, ಆ ಔಷದಿ ಬೇಡಿ. ನೀವೇ ಅಂದ್ರಲ್ಲಾ

ಜ್ವರ ಬಿಟ್‌ಹೋಯ್ತೂಂತ? ಬೇಡಿ ದೊಡ್ಡಮ್ಮ…."

ಆದರೆ ಸರಸಮ್ಮ ಪುಟ್ಟಿಗಾಸಿಗೆ ಔಷದಿ ಬಗ್ಗಿಸಿ ಜಲಜಳ ಬಾಯಿಗೆ

ಹಿಡಿದರು.

“ಅಯ್ಯೋ, ಬೇಡಿ ನಂಗೆ!”

"ಬಾಯ್ತೆರಿ, ಹೊಡೀತೀನಿ ನೋಡು!"

ಜಲಜ ನಗುತ್ತಲೆ, ಪ್ರತಿಭಟಿಸುತ್ತಲೆ, ಔಷಧಿಯ ಗುಟುಕುನುಂಗಿದಳು.

“ಮಲಕೊ ಇನ್ನು ಮಾತಾಡ್ಕೂಡ್ದು.”

"ಊಂ…। ನಂಗ್ನಿದ್ದೆ ಬರಲ್ಲ…."

“ಯಾಕೆ ಬರಲ್ಲೋ ನೋಡ್ತೀನಿ…. ಮುಚ್ಕೊಳ್ಳೆ ಕಣ್ಣು...”

ತುಂಗಮ್ಮನ ದೃಷ್ಟಿಯಲ್ಲಿದು ತಾಯಿ-ಮಕಳ ಜಗಳವಾಗಿತ್ತು ಅದ

ರಲ್ಲಿ ಸಂದೇಹವೇ ಇರಲಿಲ್ಲ ದೊಡ್ಡಮ್ಮನ ಪ್ರೀತಿಗೆ ಪಾತ್ರಳಾದ ಜಲಜ ಎಷ್ಟೊಂದು ಸುಖಿಯಾಗಿರಬೇಡ!

ಆಗಲೆ, ಗಂಜಿಯ ತಟ್ಟೆಯೊಡನೆ ಸಾವಿತ್ರಿ ಬಂದಳು. ಅದನಾಕೆ

ತುಂಗಮ್ಮನ ಎದುರಲ್ಲಿರಿಸಿದಳು. ಜಲಜ ಕೈ ತೊಳೆಯಲೆಂದು ಇಟ್ಟಿದ್ದ ಇನ್ನೊಂದು ತಟ್ಟೆಯಲ್ಲೇ ತುಂಗಮ್ಮನೂ ಕೈ ತೊಳೆದಳು.

"ತಗೋ ಮಗಳೇ, ಗಂಜಿ ಕುಡಿ."

ಆಕೆಯಿನ್ನು ಆ ಗಂಜಿ ಕುಡಿಯಬೇಕು. ಅವರು ಯಾವ ಜಾತಿಯ

ಜನವೊ ?....

ತುಂಗಮ್ಮ, ಗಂಜಿಯನ್ನೆ ನೋಡಿದಳು. ಆ ಬಿಳಿಯ ಗಂಜಿಯಲ್ಲೆ

ಒಂದೆಡೆ ಮೂಗುಬಟ್ಟಿನ ಹಾಗೆ ಕೆಂಪು ಉಪ್ಪಿನ ಕಾಯಿ ಕುಳಿತಿತ್ತು. ಅದನ್ನು ತುಂಗಮ್ಮ ತೋರು ಬೆರಳಿನಿಂದ ಮುಟ್ಟಿದಳು. ಗಂಜಿನೀರಲ್ಲಿ ಚೆಲ್ಲಾ ಪಿಲ್ಲಿಯಾಗಿ ಮುಳುಗತೊಡಗಿತು ಮೂಗುಬಟ್ಟು!

... ಯಾವ ಜನವಾದರೇನು ? ಇನ್ನೆಲ್ಲ ಅಂಥ ಪ್ರಶ್ನೆಗೆ ಅವಕಾಶ

ವಿದೆಯೇ?