ಪುಟ:Abhaya.pdf/೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸುವಾಗ ದೋಷ ಕಂಡುಬಂತು


ಧಾಮ?.....ತನ್ನ ವಿದ್ಯಾಭ್ಯಾಸವನ್ನು ಕುರಿತು ಜಲಜ ಪ್ರಶ್ನಿಸುತಿದ್ದಾಳೆ... "ಓದು ನಾಲ್ಕು ವರ್ಷ ಹಿಂದೆಯೇ ನಿಲ್ಲಿಸಿದೆ ಜಲಜ." "ಯಾವ ಕ್ಲಾಸ್ನಲ್ಲಿ?" "ಫೋರ್ತ್ ಫಾರಂನಲ್ಲಿ.ಆ ವರ್ಷ ನಮ್ಮಕ್ಕನ ಮದುವೆಯಾಯ್ತು.ಆಮೇಲೆ ಸ್ಕೂಲು ಬಿಟ್ಬಟ್ಟೆ." ಅವರಕ್ಕ-ಅಕ್ಕನ ಮದುವೆ. ..ತುಂಗಮ್ಮನಿಗಿಂತ ದೊಡ್ಡವಳಾದ,ಆದರೆತುಂಗಮ್ಮನ ಹಾಗೆಯೇ ಇರುವ, ಇನ್ನೊಂದು ಜೀವವನ್ನು ಕಲ್ಪಿಸಿ ಕೊಂಡಳು ಜಲಜ. ಮದುವೆಯಾದ ಅಕ್ಕ.... ಮಕ್ಕಳೂ ಇರಬಹುದು ಆ ದಂಪತಿಗಳಿಗೆ. ಆದರೆ ಈ ತುಂಗಮ್ಮ ಇಲ್ಲಿ.....