ಪುಟ:Abhaya.pdf/೫೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಜಲಜಳ ನಗು ಅಂಟು ಜಾಡ್ಯವಾಗಿತ್ತೆಂದು ತುಂಗಮ್ಮನೂ ನಕ್ಕಳು.

ಆಗ ಬಾಗಿಲು ತಳ್ಳಿ ದೊಡ್ಡಮ್ಮ ಬಂದರು. ಪ್ರೀತಿಯ ದೃಷ್ಟಿಯಿಂದ

ಅವರನ್ನು ನೋಡಿದಳು ತುಂಗಮ್ಮ. ಈ ಹೆಂಗಸು ಜಲಜಳ ದೊಡ್ಡಮ್ಮ ಮಾತ್ರವಲ್ಲ, ತನಗೂ ದೊಡ್ಡಮ್ಮನೇ, ತಮಗೆಲ್ಲರಿಗೂ ದೊಡ್ಡಮ್ಮನೇ....

“ಏನ್ರೇ ಇದು, ಏನು ಗಲಾಟೆ. ಇದೇನೆ ಜಲಜಾ ಹೀಗ್ನಗೋದು.

ಒಳ್ಳೇ ಕಾಹಿಲೆಯವಳು ನೀನು !"

ಜಲಜ ಎದ್ದು ಕುಳಿತು, ನಗುತ್ತಲೇ ಇದ್ದಳು ನಾಲ್ಕು ನಿಮಿಷ.

“ದೊಡ್ಡಮ್ಮ, ನಾನು ಕಾಲೇಜು ಓದಿದೀನಿ ಅಂತಾರೆ ಈ ತುಂಗಕ್ಕ!

ಕೇಳಿದ್ರಾ ?”

“ಸರಿ, ನೀನೊಬ್ಬಳು,” ಎಂದರು ದೊಡ್ಡಮ್ಮ,

ತುಂಗಮ್ಮ ನಗು ನಿಲ್ಲಿಸಿ ಸುಮ್ಮನಾದಳು.

“ಈಕೆ ಮಹಾ ಮಾತಿನಮಲ್ಲಿ, ಏನಾದರೂ ಅಂದರೆ ಮನಸ್ಸಿಗೆ

ಹಚ್ಕೋಬೇಡ ತುಂಗ”

“ಇಲ್ಲ," ಎ೦ದಳು ತುಂಗಮ್ಮ

“ನಂಗೂ ಮೊದಲು ಹಾಗೆ ಅನಿಸಿತ್ತು ಹಿಂದೆ ಓದು ಬರಹ ಇವಳಿಗೆ

ಚೆನಾಗಿ ಬರುತ್ತೇನೋಂತ ಭಾವಿಸಿದ್ದೆ.”

“ಆ ಮೇಲೆ ನೋಡ್ದಾಗ ನಾನು ಮಹಾ ದಡ್ಡೀಂತ ಗೊತ್ತಾಯ್ತು,

ಅಲ್ವೆ ದೊಡ್ಡಮ್ಮ ?"

ಹಾಗೆ ಕೇಳಿದಾಗ ತುಂಟತನ ಜಲಜಳ ದೃಷ್ಟಿಯಲ್ಲಿ ತುಂಬಿ

ಕೊಂಡಿತ್ತು.

ದೊಡ್ಡಮ್ಮ ತಾವೂ ನಕ್ಕು ಮಾತಿನ ಸರಣಿಗೆ ವಿರಾಮಕೊಟ್ಟರು.

ಮರುಕ್ಷಣವೆ ಅವರ ಮುಖ ಗಂಭೀರವಾಯಿತು. ದಿನದ ಕಾರ್ಯ

ಕ್ರಮದಲ್ಲಿ ಅವರು ನಿರತರಾಗಬೇಕಿನ್ನು.

ಆರು ಗಂಟೆಗೇ ಎದ್ದು ಹುಡುಗಿಯರೆಲ್ಲಾ ಆಗಲೆ ಪ್ರಾತರ್ವಿಧಿಗಳನ್ನು

ತೀರಿಸಿದ್ದರು. ಆರೂವರೆಗೆ ಸಾಮೂಹಿಕ ಪ್ರಾರ್ಥನೆ...

"ಈ ದಿವಸ ನಾನು ಏಳಲೆ ದೊಡ್ದಮ್ಮ ?"

-ಎಂದು ಜಲಜ ವಿನಯದಿಂದ ಬೇಡಿಕೊಂಡಳು.