ಪುಟ:Abhaya.pdf/೫೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸರಸಮ್ಮನ ಪುಸ್ತಕಗಳನ್ನು ಬಟ್ಟೆ ಬರೆಗಳನ್ನು ಓರಣವಾಗಿ ಇಡ

ತೊಡಗಿದಳು ಅಲಮೇಲು. ತುಂಗಮ್ಮನೆದ್ದು ಸೀರೆ ಸರಿಪಡಿಸಿ ಹೆರಳು ಬಿಗಿದುಕೊಂಡಳು.

ಅಲಮೇಲು ದೊಡ್ಡಮ್ಮನ ಸೀರೆ-ಪುಸ್ತಕಗಳನ್ನು ಮುತತಟ್ಟುವುದನ್ನು

ಓರೆಗಣ್ಣಿನಿಂದ ದಮಯಂತಿ ಕಂಡಳು. ಅ ನೋಟ ಆಕೆಗೆ ಸಹನೆಯಾಗಲಿಲ್ಲ.

"ಮುಟ್ಭೇಡ ಅದನ್ನ!"

---ಎಂದು ದಮಯಂತಿ ಕಿರಿಚಿಕೊಂಡಳು.

ಆದರೆ ಆಲಮೇಲು, ಆಕೆಯನ್ನು ದಿಟ್ಟಸಿ ನೋಡಿದಂತೆ ಮಾಡಿಯೂ

ತನ್ನ ಕೆಲಸದಲ್ಲೇ ತಲ್ಲೀನಳಾದಳು.

ತಾವಿಬ್ಬರೂ ಆಫೀಸು ಕೊಠದಿಯಲ್ಲಿ ಶಿಕ್ಷೆ ಅನುಭವಿಸುತ್ತಿರುವ ಅಪ

ರಾಡಧಿಗಳು; ದೊಡ್ಡಮ್ಮನಿಗೆ ನೆರವಾಗುವ ಹಕ್ಕು ಹೇಗೆ ಬರಬೇಕು ಆಲಮೇಲುಗೆ? ದಮಯಂತಿ ಹಾಗೆ ಪ್ರತಿಭಟಿಸುವುದರಲ್ಲಿ ಅರ್ಥವಿತ್ತು!

ಆ ಪ್ರತಿಭಟನೆ ಅಲಮೇಲು ಮಣಿಯದೆ ಇದಾಗ ಮತ್ತೊಂದು

ಕಾಳಗ ಶತಃ ಸಿದ್ದ. ಅದಣನ್ನು ಇದಿರು ನೋಡುತ್ತಲೇ ಇದ್ದಳು ಜಲಜ.

ಇನ್ನೇನು, ದಮಯಂತಿ ಅಲಮೇಲುವಿನ ಮೇಲೆರಗಬೇಕು ಎನ್ನು

ವ‌‌ಷ್ಟರಲ್ಲೆ ದೊಡ್ಡಮ್ಮ ಒಳಗೆ ಬಂದರು. ಮನಸಿನ ನೆಮ್ಮದಿಯನ್ನು ಕೆಡಿಸಿಕೊಂಡೇ ಬಂದ ಅವರಿಗೆ ಹೊಸ ದೂರನ್ನು ಯಾರೂ ಒಪ್ಪಿಸಲಿಲ್ಲ ಇಲ್ಲ.

ತನಗೆ ಆಶ್ರಯ ನೀಡಿದ್ದ ದೊಡ್ದಮ್ಮನನ್ನು ಆ ಸ್ಥಿತಿಯಲ್ಲಿ ಕಂಡು

ತುಂಗಮ್ಮನ ಮುಖ ಬಾಡಿತ್ತು. ಹಳೆಯ ಕಹಿನೆನಪುಗಳನ್ನೆಲ್ಲ ಬಲು ಸುಲಭವಾಗಿ ಮರೆಯುವ ಮದುರವಾತಾವರಣವಿದೆಂದು ಭಾವಿಸಿದ್ದಳು ತುಂಗಮ್ಮ. ಆದರೆ ಆ ವಾತಾವರಣ ಮದುರವಾಗಿರಲಿಲ್ಲ. ಸಿಡಿಮಿಡಿಹಗೊಂಡಿದ್ದ ದ್ದೊಡ್ಡಮ್ಮನ ಮುಖದಿಂದ ಏನು ಮಾತು ಬರುವುದೋ ಏಂಬ ಅಳುಕು ಆಕೆಯ ಹೃದಯವನ್ನು ಕೊರೆಯಿತು.

ಆದರೆ ಹೊರಬಂದಮಾತನ್ನು ಕೇಳಿದಾಗ ಆಕೆಗೆ ಸೋಜಿಗವೆನಿಸದೆ

ಇರಲಿಲ್ಲ. ಅದೇ ಆಗ ಹಾಗೆ ರೇಗಿದ್ದವರು ಮರುಕ್ಷಣದಲ್ಲೆ ವಾತ್ಸಲ್ಯ ಪೂರ್ಣವಾಗಿ ಮಾತನಾಡುವುದು ಸಾಧ್ಯವೆಂದು ಆಕೆ ತಿಳಿದಿರಲಿಲ್ಲ.

"ಜಲಜ಼ಾ, ಮುಖ ಎಲ್ಲಿ ತೊಳೀತೀಮ್ಮಾ?ನಡೆಯೋಕಾಗುತ್ತೋ?"