ಪುಟ:Abhaya.pdf/೬೧

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಹೂಂ ಸುಂದ್ರಾ. ತುಂಗಕ್ಕ ಕೇಳ್ತಾರೆ, ಚೆನ್ನಾಗಿದೀಯಾ ಅಂತ."

"ಇಂಗಿವ್ನಿ ಅಕ್ಕಾ!"

ಉತ್ತರವಿತ್ತ ಆ ದ್ವನಿಯಲ್ಲಿ ಆತುರವಿತ್ತು. ಹೊಸಜೀವದ ಪರಿ

ಚಯ ತನಗಾಯಿತೆಂಬ ಪರಮ ಸಂತೋಷವಿತ್ತು. ಆ ಕಣ್ಣುಗಳು ಹನಿಗೂಡಿದನ್ನು ಕಂಡಳು ತುಂಗಮ್ಮ. ಆ ಅಭಾಗಿನಿಯನ್ನು ಅಲ್ಲಿ ನಿಂತು ದಿಟ್ಟಿಸುವುದಾಗಲೇ ಇಲ್ಲ ಅವಳಿಂದ

ಅದನ್ನು ಗಮನಿಸಿ ಜಲಜ ಹೇಳಿದಳು:

"ಬಚ್ಚಲ ಮನೆಗೆ ಹೋಗ್ತೀವಿ ಸುಂದ್ರಾ...."

"ಊನಕ್ಕಾ ಓಗ್ಬನ್ನಿ.... ಆಮ್ಯಾಕೆ ಚಂಜೆಗೆ ಬತ್ತೀಯಾ?"

"ಬರ್ತೀನಿ"

"ಅವರ್ನೂ ಕರಕೊಂಡ್ಬಾ"

"ಹೂಂ ಸುಂದ್ರಾ...."

ಬಚ್ಚಲು ಮನೆ ಅಲ್ಲಿಯೇ ಇತ್ತು. ಆದರೂ ಅವರನ್ನು ಯಾವುದೋ

ದೂರದೇಶಕ್ಕೆ ಕಳುಹಿಕೊಟ್ಟವಳಂತೆ ಆ ಕುರುಡಿ ಕೈ ಬೀಳಿಸಿದಳು.

ಬಚ್ಚಲು ಮನೆಯೊಳಗೆ ಜಲಜ ಕೊಳಾಯಿ ತಿರುಗಿಸಿದಾಗ ತುಂಗಮ್ಮ

ಹೇಳಿದಳು:

"ಪಾಪ! ಎಷ್ಟೊಂದು ಕಷ್ಟ ಆಕೆಗೆ! ಎಷ್ಟು ವರ್ಷದಿಂದ ಹೀಗೆ?"

ಹಂಡೆಗೆ ಸುರಿಯುತ್ತಿದ್ದ ನೀರಿನ ಸ್ವರವನ್ನು ಮೀರಿಸಿ ಜಲಜ

ಅಂದಳು:

"ಕುರುಡಿಯಾಗಿಯೇ ಹುಟ್ಟಿದ್ಲಂತೆ ಹತ್ತು ವರ್ಷವಾದಾಗ್ಲೋ

ಏನೋ ಸಿಡುಬಾಯ್ತಂತೆ. ಇಲ್ಲಿಗೆ ಬಂದು ಒಂದೆರಡು ವರ್ಷ ಆಯ್ತು".

"ಅವಳೇ ಬಂದಳೆ?"

__ಎಂದಳು ತುಂಗಮ್ಮ. ತಾನಾಗಿಯೇ ಬಂದುದನ್ನು ನೆನಸಿ

ಕೊಳ್ಳುತ್ತಾ.

"ಪೋಲೀಸ್ನೋರು ಬಂದು ಹೇಳಿದ್ರು. ಬಸ್ ಸ್ಟ್ಯಾಂಡಿನತ್ರ ಒಬ್ಲು

ಕುರುಡಿ ಹುಡುಗಿ ಬಿದ್ದಿದಾಳೆ-ತಗೋತೀರಾ, ಅಂತ. ದೊಡ್ಡಮ್ಮ ಹೂಂ- ಅಂದ್ರು."