ಪುಟ:Abhaya.pdf/೬೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಪಾಪ! ಸಂಕಟವಾಗುತ್ತೆ ಆಕೇನ ನೋಡ್ದಾಗ...."

---ಹಾಗೆ ಹೇಳಿದ ತುಂಗಮ್ಮನಿಗೆ ಆ ಘಳಿಗೆಯಲ್ಲಿ ತನ್ನ ಸಂಕಟದ

ನೆನಪಾಗಲೇ ಇಲ್ಲ

"ಆಕೆಗೆ ವಯಸ್ಸು ಎಷ್ಟಾದೀತು ಹೇಳಿ?"

"ಚಿಕ್ಕ ಹುಡುಗಿ ಅಲ್ಲ!"

"ಚಿಕ್ಕ ಹುಡುಗಿ' ಆಕೆಗೇನೋ ಯಾವುದೂ ನೆನಪಿಲ್ವಂತೆ. ಆದರೆ

ಹದಿನೇಳೋ ಹದಿನೆಂಟೋ ಆಗಿರ್ಬೇಕು ಅಂತಾರೆ ದೊಡ್ದಮ್ಮ ಪುಸ್ತಕದಲ್ಲಿ ಹದಿನೇಳು ಅಂತಾನೆ ಬರೆದಿದಾರೆ."

"ಓ!"

ಪುಸ್ತಕದಲ್ಲಿ ಬರೆಯುವುದು...ತನ್ನದನ್ನಿನೋ ಅವರು ಬರೆದು

ಕೊಂಡಿಲ್ಲವೆಂಬುದು ತುಂಗಮ್ಮನಿಗೆ ಮತ್ತೊಮ್ಮೆ ನೆನವಾಯಿತು. ತನ್ನ ಪೂರ್ವಕತೆಯನ್ನು ಇನ್ನು ಕೇಳಲಿರುವರೆಂಬ ನಿಷಯ ಆಕೆಯ ಮುಖ ಬಾಡಿಸಿತು

ಅಲ್ಲೆ ಇದ್ದ ಹಲ್ಲಿನ ಪುಡಿಯನ್ನು ತುಂಗಮ್ಮನ ಅಂಗೈಗೆ ಸುರಿಯುತ್ತಾ

ಜಲಜ ಕೇಳಿದಳು:

"ನಿಮಗೆಷ್ಟು ವಯಸ್ಸು ಅಕ್ಕ?"

"ಹದಿನೆಂಟು ದಾಟಿತು"

"ನಾನು ಸರಿಯಾಗೇ ಊಹಿಸಿದ್ದೆ. ನನಗಿಂತ ಸ್ಪಲ್ಪ ದೊಡ್ದೋರು

ನೀವು."

ಹಿರಿತನದ ಸುಖಕ್ಕಾಗಿ ನಕ್ಕು ತುಂಗಮ್ಮ, ಪುಡಿಯನ್ನು ತೋರು

ಬೆರಳಿಂದೆತ್ತಿ ತನ್ನ ಹಲ್ಲುಗಳಿಗೆ ತೀಡಿದಳು. ವಯಸ್ಸು ವಿಚಾರಿಸಿದ ಜಲಜ ಬೇರೇನು ಪ್ರಶ್ನೆ ಕೇಳುವಳೋ ಎಂದು ತುಂಗಮ್ಮನ ಮನಸ್ಸು ಅಶಾಂತವಾಯಿತು.

ಆದರೆ ಜಲಜ, ಯಾವುದೋ ಯೋಚನೆಯಲ್ಲಿ ತಲ್ಲೀನಳಾಗಿಯೇ,

ಹಲ್ಲು ತಿಕ್ಕಿ ಮುಖ ತೊಳೆದುಕೊಂಡಳು.

ಆ ಮೇಲೆ ನೇರವಾಗಿ ನಿಂತು "ಉಸ್ಸಪ್ಪ!" ಎಂದು , "ನಿತ್ರಾಣ,

ಅಮ್ಮ---" ಎನ್ನುತ್ತಾ ಜಲಜ ಮೈಕೈ ಮುರಿದುಕೊಂಡಳು.