ಪುಟ:Abhaya.pdf/೬೬

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸ್ನಾನ ಮುಗಿಸಿ ಬಂದಳು ತುಂಗಮ್ಮ.

ಆಕೆಯ ವಾಲಿಗೆ ಹೊತ್ತು, ಸಮಾಧಾನ-ಅಸಮಧಾನಗಳ ಜಗ್ಗಾಟ

ದಲ್ಲಿಯೆ ಕಳೆಯಿತು.

ಟಕಾ-ಟಕ್ ಎಂದು ಬಾಗಿಲು ತಟ್ಟಿದ ಸದ್ದಾಯಿತು ಹತ್ತು ಗಂಟಿಯ

ಸುಮಾರಿಗೆ.

"ಟೀಚ ಬಂದ್ರು ," ಎಂದಳು ಜಲಜ.

"ಟೀಚ?"

"ಹೂಂ. ಪಾಠ ಹೇಳ್ಕೋಡೋರು."

"ಓ!"

ಸರಸಮ್ಮ ಬಾಗಿಲ ಬಳಿಸಾರಿ, ಸೊಂಟದಿಂದ ಬೀಗದ ಕೈ ಗೊಂಚಲ

ನ್ನೆತ್ತಿ ಬೀಗ ತೆಗೆದುದನ್ನೆ ಕುತೂಹಲದಿಂದ ತುಂಗಮ್ಮ ನೋಡಿದಳು.

"ಒಳ್ಳೆ ಜೈಲು ಇದ್ದ ಹಾಗಿದೆ ಅಲ್ವಾ??"

-ಎನ್ನುತ್ತ ಜಲಜ ನಕ್ಕಳು.

"ಇಡೀ ದಿನ ಬೀಗ ಹಾಕಿಯೇ ಇರ್ತಾರ?"

"ಹೂಂ. ಮತ್ತೇ ."

'ಯಾಕೆ?"

"ಅಯ್ಯೋ ನೀವೆ! ನಾವು ಓಡಿ ಹೋದರೆ ಏನ್ರಿ ಮಾಡೋದು ?"

ಕಣ್ಣೀರಲ್ಲೆ ಕೈ ತೊಳೆಯುವ ಹತಭಾಗಿನಿಯರೇ ಎಲ್ಲರೂ ಆಗಿರುವ,

ಪರಸ್ಪರ ಅನುತಾಪ ಸಹಾನುಭೂತಿಯದೇ ಆದ, ವಾತಾವರಣ ಒಂದೆಡೆ. ಆ ಕಲ್ಪನೆಯ ನೋವಿನಲ್ಲೂ ಸುಖವಿತ್ತು . ಇತ್ತ , ಓಡಿ ಹೋಗಬಯಸುವವರನ್ನೂ ನಾಲ್ಕು ಗೋಡೆಗಳ ನಡುವೆ ಬಂಧಿಸಿ ಇಡುವಂತಹ ಚಿತ್ರ ಇನ್ನೊಂದೆಡೆ . ಅದು ,ಹೃದಯ ಮತ್ತಷ್ಟು ಭಾರವಾಗುವಂತಹ ಕಲ್ಪನೆಯಾಗಿತ್ತು.