ಪುಟ:Abhaya.pdf/೬೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅಂತಹ ಯೋಚನೆಯ ನಡವಿನಲ್ಲೂ ತುಂಗಮ್ಮ ಬಾಗಿಲಿನತ್ತ

ನೋಡಿದಳು. ಅಭಾಗಿನಿಯರಿಗೆ ಪಾಠ ಹೇಳಿಕೊಡುವ ಅಧ್ಯಾಪಿಕೆ ಒಳ ಬಂದರು.

.....ಅದೇ ಆಗ ಮೂವತ್ತು ದಾಟಿದ್ದ ಯೌವನ; ಆಧುನಿಕ ಬೆಡಗು

ಬಿನ್ನಾಣ; ಇದ್ದ ಸೌಂದರ್ಯಕ್ಕೇ ಆಕೆ ಅಲಂಕಾರ ಮಾಡಿಕೊಂಡಿದ್ದರು.

ಸುವಾಸನೆಯ ಗಾಳಿಯಾಗಿ ಬೀಸುತ್ತ ಆಫೀಸು ಕೊಠಡಿಯೊಳಕ್ಕೆ ಆಕೆ ಬಂದೊಡನೆ ಜಲಜ , "ನಮಸ್ತೆ ಟೀಚ," ಎಂದಳು.

"ಎದ್ಬಿಟ್ಯಾ? ಗುಡ್....

ರೂಪ ಸುಂದರ ನಿಜ. ಆದರೆ ಸ್ವರ ಇಂಪಾಗಿರಲಿಲ್ಲ.

ಅಧ್ಯಾಪಿಕೆಯ ದೃಷ್ಟಿ ತುಂಗಮ್ಮನನ್ನು ತೂಗಿ ನೋಡಿತು.

ಅದನ್ನು ಕಂಡ ಸರಸಮ್ಮ ಹೇಳಿದರು:

"ಈಕೆ ತುಂಗಮ್ಮಂತ. ಹೊಸಬಳು, ನಿನ್ನೆ ರಾತ್ರೆ ಅಡ್ಮಿಟಾಯ್ತು."

ಸಂಕೋಚಪಡುತ್ತ ತುಂಗಮ್ಮ ತನಗೆ ಹೊಸಬಳಾದ ಆ ಹೆಂಗಸಿಗೆ

ಕೈಮುಗಿದಳು.

"ನಮಸ್ತೆ !"

---ಎಂದರು ಅಧ್ಯಾಪಿಕೆ. ಉತ್ತರದ ಜತೆಯಲ್ಲೆ ಮುಗುಳು ನಗೆ

ಇತ್ತು. ಆ ಮುಗುಳು ನಗೆಯೊಡನೆ ತನ್ನ ಹಿರಿಮೆಯನ್ನು ಸಾರುವ ಗಾಂಭೀರ್ಯ ಬೆರೆತಿತ್ತು.

ಅವರನ್ನು ನೋಡುತ್ತಲೆ , ತನಗರಿಯದಂತೆಯೇ ತುಂಗಮ್ಮನ

ಮನಸ್ಸು ಮುದುಡಿಕೊಂಡಿತು.

ಸರಸಮ್ಮ ಮತ್ತು ಅಧ್ಯಾಪಿಕೆ ಹೊರ ಹೋದೊಡನೆ ಜಲಜ ,

ತುಂಗಮ್ಮ ಮುಖವನ್ನೆ ನೋದಿದಳು . ಕೇಳು ಪ್ರಶ್ನೆ-ಎನ್ನುವಂತಿತ್ತು ಆ ನೋಟ . ಆದರೆ ತುಂಗಮ್ಮ ಮಾತನಾಡಲಿಲ್ಲ. ಆ ಮೌನವನ್ನು ಸಹಿಸದೆ ಜಲಜೆಯೇ ಕೇಳಿದಳು:

"ಹ್ಯಾಗಿದಾರೆ ನಮ್ಮ ಟೀಚ ?"

"ಚೆನ್ನಾಗಿದಾರೆ."

"ನೋಡೋಕೆ , -ಅಲ್ಲ ?"