ಪುಟ:Abhaya.pdf/೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೂಲೆಯ ಸಣ್ಣ ಹಟ್ಟಿಯಲ್ಲಿ ಕೆಲಸದವರ ನಡುವೆ ಮುದ್ದು ಹುಡುಗಿ ಜಲಜ ಬೆಳೆದಳು, ಮನೆಯ ಮಗಳ ಜತೆಗಾತಿಯೆಂದು ಶಾಲೆಗೂ ಹೋದಳು. ಬೇಗನೆ ಮನೆಯ ಕೆಲಸದವಳೂ ಆದಳು. ಅದು ಸಾವಿನಂತಹ ಬದುಕು...ಆ ಸಂಕಟ ಸಹಿಸಲಾರದೆ, ಲಂಗ ಕಳೆದು ಸೀರೆಯುಡುವ ಹೊತ್ತಿಗೆ ಜಲಜ ಓಡಿ ಹೋದಳು.ಹೊರಗೆ ಪಿಶಾಚಿಗಳು ಆಕೆಗಾಗಿ ಕಾದಿದ್ದುವು ಒಳ್ಳೆಯವರೊಬ್ಬರು ಹುಡುಗಿಯನ್ನು ರಸಿ ಆಭಯಧಾಮದ ವಶಕ್ಕೊಪ್ಪಿಸಿದರು....

"ಏಳು ಜನವಂತೆ ನಾವು ನನಗಿಂತಲೂ ಚಿಕ್ಕದು ಒಂದಿತ್ತಂತೆ.

ಕೈಗೂಸು. ಅದೂ ಹೆಣ್ಣೇ. ಉಳಿದ ಐವರಲ್ಲಿ ಅಣ್ಣಂದಿರೆ ಅಕ್ಕಂದಿರೆ! ತಂದೆ-ತಾಯಿ ನೋಡೋಕೆ ಗಿದ್ದರೊ! .ಇನ್ನೂ ನಂಗೆ ಹೇಳಿದ್ದು ನನ್ನ ಸಾಕಿ ದೊಡ್ಡೋಳಾಗಿ ಮಾಡ್ದ ಕೆಲಸದೋಳು ನಂಗೆ ಹತ್ತು ವವಾಗಿದ್ದಾಗ್ಲೆ ಅವಳು ಸತ್ತೋದ್ಲು: ಮಾವ! ಆಕೆ ಬದುಕಿ ಇದ್ದಿದ್ರೆ ಬಹುಶಃ ನಾನು ಇಲ್ಲಿಗೆ ಬ ಏನೊ! ."

ಅಷ್ಟು ಹೇಳಿ ಜಲಜೆ ನಿಟ್ಟುಸಿರು ಬಿಟ್ಟಳು

"ಹೋಗಲಿ ಬಿಡಿ ಇದೆಲ್ಲಾ . ಹೇಖಳೋಕೆ ಬೇಜಾರು,"ಎಂದಳು.

ಹಾಗಲ್ಲವೆಂದು ಸಂತೈಸುವ ಮಾತನಾಡಬೇಕೆಂದು ತುಂಗಮ್ಮನಿಗೆ

ಅನಿಸಿತು. ಆದರೆ ತಡವರಿಸಿತು ನಾಲಿಗೆ

ಎರಡು ನಿಮಿಷಗಳಲ್ಲೆ ಜಲಜ,ದುಃಖವನ್ನು ಹೊತ್ತು ತಂದಿದ್ದ

ಮೋಡ ದೂರ ಸರಿಯಿತೇನೊ ಎಂಬಂತೆ,ಮುಗುಳ್ನಕ್ಕಳು.

"ನಿಮಗೊಂದು ತಮಾಷೆ ಗೊತ್ತಾ ತುಂಗಕ್ಕ ?"

"ಏನಮ್ಮಾ ?"

"ನಾನು ಬೇರೆ ಹುಡುಗೀರಿಗೆ ರಾಜಕುಮಾರ-ರಾಜಕುಮಾರಿ ಕತೆ

ಹೇಳ್ತಾ ಇದ್ದರೆ ದೊಡ್ದಮ್ಮ ಯಾವಾಗ್ಲೂ ನನ್ನ ಗೇಲಿ ಮಾಡ್ತಾರೆ, ರಾಜಕುಮಾರಿ-ಅಂತಾರೆ !"

"ಒಳ್ಳೆಯವರು ದೊಡ್ದಮ್ಮ "

"ಅವರು ಏನಂತಾರೆ ಗೊತ್ತೇನು? ನಿಜವಾದ ಜೀವನಕ್ಕಿಂತ ಹೆಚ್ಚು

ಸ್ವಾರಸ್ಯವಾದ ಕಥೆಯೇ ಬೇರೆ ಇಲ್ಲವಂತೆ.ನಾವೀಗ ಇಲ್ಲಿ, ನಿಮ್ಮನ್ನೂ