ಪುಟ:Abhaya.pdf/೭೨

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಸೇರಿಸಿ, ಮೂವತ್ತೊಂದು ಜನ ಇದೀವಲ್ಲ. ನಮ್ಮಒಬ್ಬೊಬ್ಬರ ಜೀವನ ಚರಿತ್ರೇನೂ ಒಂದು ಒಳ್ಳೊಳ್ಳೆ ಕತೆ ಆಗತ್ತೇಂತ ಆವರ ಅಭಿಪ್ರಾಯ."

ಆ ಮಾತು ನಿಜವೇ-ಅನಿಸಿತು ತುಂಗಮ್ಮನೆಗೆ. ಉದಾಹರಣೆಗೆ

ತನ್ನದೇ ಕತೆ. ತನಗಾದುದನ್ನೆಲ್ಲ ಬರೆದಿಟ್ಟರೆ, ಯಾವ ಒಳ್ಳೆಯ ಕಾದಂಬರಿಗಿಂತ ಕಡಿಮೆ ಎನಿಸೀತು ಆ ವಿಷಯ ?

"ದೊಡ್ಡಮ್ಮ ತುಂಬಾ ತಿಳ್ದೋರು ಜಲಜ."

"ಆದರೆ ರಾಜಕುಮಾರ ರಾಜಕುಮಾರಿ ಇಲ್ದೆ ಕತೆ ಹ್ಯಾಗಾಗುತ್ತೆ

ತುಂಗಕ್ಕ.?"

ವಯಸ್ಸಿನಲ್ಲಿ ಜಲಜೆಗಿಂತ ತುಸುಮಾತ್ರ ಹಿರಿಯಳಾದರೂ, ತಾನು

ನಿಜವಾಗಿಯೂ ಹೆಚ್ಚು ವಯಸ್ಸಾದ ಹಿರಿಯಕ್ಕನೇ ಎಂಬ ಭಾವನೆಯಿಂದ ತುಂಗಮ್ಮ,ಪ್ರೀತಿಯಿಂದ ಮುಗುಳ್ನಗುತ್ತ ಜಲಜೆಯ ಮುಗ್ಧ ಮುಖವನ್ನೆ ದಿಟ್ಟಿಸಿದಳು

ಮೌನಕ್ಕೂ, ಜಲಜೆಗೂ ಕಡುದ್ವೇಷವೋ ಏನೊ!

ಮತ್ತೊಮ್ಮೆ ಆಕೆಯೇ ಬಾಯಿ ತೆರೆದಳು

"ನಿನ್ನೆ ರಾತ್ರೆ ನಿಮ್ಹೆಸರೇನ್ರೀ ಅಂತ ಕೇಳ್ದೆ."

"ಹೂಂ.ಹೌದು."

"ನೀವು ತುಂಗಮ್ಮಾಂದ್ರಿ"

ಮಾತಿನ ಈ ಹೊಸರೀತಿ ಅರ್ಧವಾಗಲಿಲ್ಲ ತುಂಗಮ್ಮನಿಗೆ ಆದರೆ,

ಆಕೆಗೆ ಅಥವಾಯಿತೋ ಇಲ್ಲವೋ ಜಲಜ ಯೋಚಿಸಬೇ ಕಲ್ಲವೆ?

"ನೀವು ತುಂಗಮ್ಮಾಂತ ಆಂದಾಗ ನನ್ನಗೆಷ್ಟು ನಿರಾಶೆಯಾ

ಯ್ತೂಂತ?"

ಈಗ ತುಂಗಮ್ಮನಿಗೆ ಆಶ್ಚರ್ಯವೇ ಆಯಿತು. ಎಂತಹ ವಿಚಿತ್ರ

ಹುಡುಗಿ ಈ ಜಲಜ!

"ಯಾಕಮ್ಮ?"

"ನಿಮ್ಮ ಹೆಸರು ಪ್ರೇಮಲತಾನೋ ಪುಷ್ಪಲತಾನೋ ಇರಬಹು

ದೂಂತಿದ್ದೆ."