ಪುಟ:Abhaya.pdf/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಹೂಂ !!"

"ಆ ಹೆಸರು ಚೆನ್ನಾಗಿರತ್ತೆ ಅಲ್ವಾ?"

"ಅಂತೂ ತುಂಗಮ್ಮ ಅನ್ನೋದು ಲಾಯಕ್ಕಾಗಿಲ್ಲಾನ್ನು."

"ಹಾಗಲ್ಲ ತುಂಗಕ್ಕ. ನಿಮ್ಹೆಸರು ಚೆನ್ನಾಗೆ ಇದೆ, ಆದರೂ

ಪ್ರೇಮಲತಾ ಅಥವಾ ಪುಷ್ಪಲತಾಂತ ಇದ್ದಿದ್ರೆ?"

"ಏನಾಗ್ತಿತ್ತೊ?"

"ಒಬ್ಬ ರಾಜಕುಮಾರ ಒಬ್ಬಳು ರಾಜಕುಮಾರೀನ ಪ್ರೀತಿಸೋದು.

ಪ್ರೀತಿಸಿ ಆದ್ಮೇಲೆ ಕೈ ಬಿಟ್ಟಡೋದು ರಾಜಕುಮಾರಿ ಗರ್ಭಿಣಿ ಆಗಿ ಸಂಕಟ ಪಟ್ಕೊಂಡು ಅಭಯಾಶ್ರಮಕ್ಕೆ ಬರೋದು, ಹಾಗೆ ಬಂದೋಳಿಗೆ ಪ್ರೇಮಲತಾ ಅಥವಾ ಪುಷ್ಪಲತಾ ಅಂತ ಹೆಸರಿದ್ದಿದ್ರೆ?"

"ಥೂ! ಥೊ!"

ತುಂಗಮ್ಮನ ಮುಖ ಕೆಂಪಗಾಯಿತು.

"ನಿಮ್ಮನ್ನ ನೋಡಿದ್ಕೂಡ್ಲೆ ನೀವು ರಾಜಕುಮಾರಿ ಅಲ್ಲ ಅನ್ನೋದು

ನನಗೆ ಗೊತ್ತಾಯ್ತೂಂತಿಟ್ಕೊಳ್ಳಿ. ರಾಜಕುಮಾರಿ ಅಲ್ಲ ಅನ್ನೋದು ನನಗೆ ಗೊತ್ತಾಯ್ತೂಂತಿಟ್ಕೊಳ್ಳಿ. ರಾಜಕುಮಾರಿ ಅಲ್ಲ ಅನ್ನೋದು ನನಗೆ ಗೊತ್ತಾಯ್ತೂಂತಿಟ್ಕೊಳ್ಳಿ. ರಾಜಕುಮಾರಿ ಇಂಧಾ ಸೀರೇಲೆ ಬರೋದು?"

"ಹೋಗಮ್ಮ! ನೀನೊಬ್ಬಳು ಹುಚ್ಚಿ!"

ಆ ಮಾತು ಕೇಳಿ ಜಲಜೆಯ ತೆರೆದಬಾಯಿ ಹಾಗೆಯೇ ನಿಂತಿತು.

ತೇವವಾಗಿದ್ದ ಕಣ್ಣುಗಳು ಮಿನುಗಿದವು

"ಇನ್ನೊಮ್ಮೆ ಹೇಳಿ ಅಕ್ಕ ಅದನ್ನ."

"ಏನು?"

"ಅದೇ, ಅಂದ್ರಲ್ಲ."

"ಅಂದದ್ದು ತಪ್ಪಾಯ್ತು ಜಲಜ."

"ಅಯ್ಯೊ ಅಕ್ಕ! ನೀನು-ನೀನು-ಅನ್ನಿ ಅಕ್ಕ ನನ್ನ!...ಥೂ!

ನಿಮಗೊಂದೂ ತಿಳಿಯೋಲ್ಲ"

ತುಂಗಮ್ಮನಿಗೀಗ ಅರ್ಥವಾಯಿತು. ಆಕೆ ಜಲಜೆಯನ್ನು ಸಂಬೋಧಿಸಿ

ದಾಗ, ಸಲಿಗೆಯ ಸುಳಿಯಲ್ಲಿ ಒಮ್ಮಿಂದೊಮ್ಮೆಲೆ ನೀವು ನೀನಾಗಿತ್ತು.

ತುಂಗಮ್ಮ ಬಳಿಗೆ ಬಂದು ಜಲಜೆಯ ಮುಂಗುರುಳು ನೇವರಿಸಿದಳು.