ಪುಟ:Abhaya.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ನೀನು ಅಷ್ಟೆ ಜಲಜ.ಅಕ್ಕನಾದರೇನಂತೆ?ಹೋಗು ಬಾ ಅಂತ್ಲೇ

ಮಾತಾಡಮ್ಮ."

"ನನ್ನಕ್ಕ!"

...ಅದು ಎರಡು ಜೀವಗಳನ್ನು ಜತೆಯಾಗಿ ಹೊಸೆದ,ಒಂದಾಗಿ

ಬೆಸೆದ,ಮಧುರ ಬಂಧನ

ಅದಕ್ಕಿಂತಲೂ ಮಿಗಿಲಾದುದು ಬದುಕಿನಲ್ಲಿ ಬೇರೊಂದು ಉಂಟೆ

ಎಂದು ತೋರಿತು ತುಂಗಮ್ಮನಿಗೆ.

ಆಗೊಮ್ಮೆ ಮೌನ ತನ್ನ ವಿಜಯವನ್ನು ಸಾರಿತು. ಅಮೃತವನ್ನೆ

ತುಂಬಿಕೊಂಡ ಜಲಜೆಯ ಹೃದಯದ ಕೊಡ ಮತ್ತೆ ತುಳುಕಲಿಲ್ಲ.

ಬಹಳ ಹೊತ್ತಾದ ಮೇಲೆ ಸರಸಮ್ಮ ಬಂದರು.ಬಂದವರೇ,

ಏನನೋ ಬರೆಯುವುದರಲ್ಲಿ ಮಗ್ನರಾದರು.

ಪಾಠ ಮುಗಿಸಿಕೊಂಡು ಅಧ್ಯಾಪಿಕೆ ಒಳ ಬರುತ್ತಲೇ ಸರಸಮ್ಮ

"ಹೊರಡ್ತೀರಾ ರಜಮ್ಮ ?" ಎಂದು ಕೇಳಿದರು

"ಹೂಂ ಕಣ್ರೀ...."

ಆದರು ಆಕೆ ಹೂರಡುವ ಲಕ್ಷಣ ಕಾಣಿಸಲಿಲ್ಲ.ಅವರ ದೃಷ್ಟಿ

ತುಂಗಮ್ಮನ ಮೇಲೆಯೇ ನೆಟ್ಟಿತು.

"ಈ ಹುಡುಗಿ ಹಿಸ್ಟರೀ ಶೀಟು ಬರಕೊಂಡ್ರಾ?"

ತುಂಗಮ್ಮ ಗಾಬರಿಯಾದಳು. ಆದರೆ ಅಂತಹ ಪ್ರಶ್ನೆಯೊಂದೂ

ಸರಸಮ್ಮನಿಗೆ ಇಷ್ಟವಿರಲಿಲ್ಲವೆನ್ನುವುದು ಅದರ ಮುಖ ಚರ್ಚೆಯಿಂದಲೇ ಸ್ಪಷ್ಟವಾಗಿತ್ತು.

"ಇನ್ನೂ ಇಲ್ಲ..."

"ನಿನ್ನೆ ರಾತ್ರೇನೆ ಅಲ್ವೆ ಆಕೆ ಬಂದಿದು?"

ಉತ್ತರವಿತ್ತ ಸರಸಮ್ಮನ ಸ್ವರ ಏರಿದಂತೆ ಕೇಡಿತು. ರಾತ್ರೆ

ಬಂದ ತುಂಗಮ್ಮ ಯಾವ ಸ್ಥಿತಿಯಲ್ಲಿದ್ದಳು?ಆಗ ಅವಳು ಚರಿತ್ರೆಯನ್ನು ಕೇಳಿ ಬರೆದುಕೊಳ್ಳುವುದು ಸಾಧ್ಯವಿತ್ತೆ?ಅಷ್ಟೂ ತಿಳಿಯ ಬಾರದೆ ಈ ರಜಮ್ಮನಿಗೆ?_ಎಂದೆಲ್ಲಾ ಯೋಚಿಸಿದರು ಸರಸಮ್ಮ,ಮುಗುಳು ನಗಲೆತ್ನಿಸಿ ಅಂದರು: