ಪುಟ:Abhaya.pdf/೭೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

ತುಂಗಮ್ಮನ ಆ ಉತ್ತರಕ್ಕಿಂತಲೂ ತಾನು ಹೇಳಬೇಕಾದುದನ್ನು ಸ್ಮರಿ

ಸಿಕೊಂಡು ಜಲಜ 'ಹೊ ಹ್ಹೋ' ಎಂದು ಬಿದ್ದು ಬಿದ್ದು ನಕ್ಕಳು. ಆ ಗದ್ದ ಲದಲ್ಲಿ, ಗಂಟಲಿನ ಹಾದಿಯಲ್ಲಿ ಸಾಗಿದ್ದೊಂದು ಅನ್ನದ ಆಗಳು ಆಡ್ಡದಾರಿ ಹಿಡಿದು 'ಎಕ್ಕತ' ವೆಬ್ಬಿಸಿತು. ತುಂಗಮ್ಮ ತನ್ನ ಎಡ ಆಂಗೈಯಿಂದ ಜಲ ಚೆಯ ನಡುನೆತ್ತಿಗೆ ತಟ್ಟ, ಪರಿಸ್ಥಿತಿಯನ್ನು ಹತೋಟಗೆ ತರಲು ನೆರವಾದಳು.

ಆದಾದಮೇಲೆಯೂ ಜಲಜ ಸಣ್ಣನೆ ನಗುತ್ತಲೇ ಇದ್ದಳು.

ತುಂಗಮ್ಮನಿಗೆ ರೇಗಿತು.

"ಸಾಕು ಸಾಕೇ. ನಗೋದನ್ನಾದರೂ ನಿಲ್ಸು. ಹೇಳದೇ ಹೋದರೆ

ಆಷ್ಟೇ ಹೋಯಿತು ಎಷ್ಟೊಂದು ಬಡಿವಾರ!"

"ಕೋಪಿಸ್ಕೋಬೇಡ ನನ್ನಕ್ಕ,"

-- ಎಂದಳು ಜಲಜ ಆ ಬಳಿಕ ಸೂಕ್ಷ್ಮವಾಗಿ ತುಂಗಮ್ಮನನ್ನೊಮ್ಮೆ

ನೋಡಿ ಹೇಳಿದಳಾಕೆ:

"ಇವತ್ತು ಬೇಡ ಅಕ್ಕ ಇನ್ನೊಂದು ದಿನ ಹೇಳ್ತೀನಿ. ಅದರೆ

ಇವತ್ತು ಖಂಡಿತ ಬೇಡ."

ನಿರ್ಧಾರದ ಆ ಧ್ವನಿಯ ಮುಂದೆ ತುಂಗಮ್ಮ ಹೆಚ್ಚು ವಾದಿಸಲಿಲ್ಲ.

ಸರಸಮ್ಮಒಳ ಬಂದವರು ಕೇಳಿದರು:

"ಆಡುಗೆ ರುಚಿಯಾಗಿದೆಯೆ ತುಂಗಾ?"

ಉಣ್ಣುತ್ತಲಿದ್ದ ತುಂಗಮ್ಮ ಅದನ್ನು ಗಮನಿಸಿಯೇ ಇರಲಿಲ್ಲ.

ಆದರೆ ಹಾಗೆಂದು ಹೇಳುವುದುಂಟೆ?

"ಚೆನ್ನಾಗಿದೆ ದೊಡ್ಡಮ್ಮ."

ಆದೇ ಸರಿಯಾದ ಉತ್ತರವೆಂಬಂತೆ ಸರಸಮ್ಮ ಹೇಳಿದರು:

"ನಮ್ಮ ಹುಡುಗೀರ್ದೆ ಅಡುಗೆ. ದಿನಕ್ಕೆ ಮೂನರಹಾಗೆ ಬ್ಯಾಚ್

ಗೊತ್ತು ಮಾಡಿದೀವಿ."

"ಹೂಂ."

ತುಂಗಮ್ಮ 'ಹೂಂ' ಎಂದುದಕ್ಕೆ ಏನೂ ಆರ್ಥವಿರಲಿಲ್ಲವೇನೋ.

ಆದರೆ ಇಷ್ಟು ಮಾತ್ರ ನಿಜ. ಆಡುಗೆಯನ್ನು ಯಾರು ಮಾಡಿದವರು, ಯಾವ ಜನ, ಎಂದು ಯೋಚನೆಯೇ ಆಕೆಗೆ ಹೊಳೆದಿರಲಿಲ್ಲ.