ಪುಟ:Abhaya.pdf/೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ತನ್ನಲ್ಲಾದ ಬದಲಾವಣೆಯನ್ನು ಗುರುತಿಸಿ ತುಂಗಮ್ಮನಿಗೇ ಆಶ್ಛರ್ಯ

ವಾಯಿತು

....ಎಲ್ಲರ ಊಟವಾದ ಬಳಿಕ ಸರಸಮ್ಮನ ಊಟ.

....ಅದಾದ ಮೇಲೆ ಹಜಾರದಲ್ಲಿ ಸಾರಿಸುವುದು,ತೊಳೆಯುವುದು....

ವಿರಾಮ

ಜಲಜೆಯು ತುಂಗಮ್ಮನು ಸ್ವಲ್ಪಹೊತ್ತು ಅಡ್ಡಾದರು.

ತುಂಗಮ್ಮನಿಗೆ ನಿದ್ದೆ ಬರಲಿಲ್ಲ. ಆಕೆ ಎದ್ದು, ಅಲ್ಲೇ ಇದ್ದ ಬೀರುವಿ

ನಿಂದ ದೊರೆತೊಂದು ಕನ್ನಡ ಪುಸ್ತಕವನ್ನೆತ್ತಿಕೊಂಡಳು.

ಅದನ್ನು ಕಂಡ ಜಲಜ ಹೇಳಿದಳು:

"ಅಕ್ಕಾ ನಾನು ನಿದ್ದೆ ಹೊಗ್ತೀನಿ. ಆ ಕಥೇನೆಲ್ಲ ಓದ್ಬಿಟ್ಟು

ಆಮೇಲೆ ನಂಗೆ ಹೇಳಕ್ಕ"

"ಹೂಂ. ಜಲಜ."

ಆ ಆಶ್ವಾಸನೆ ದೊರೆತ ಬಳಿಕ ಆಕೆಗೆ ನಿದ್ದೆ ಬರುವುದು ತಡವಾಗಲಿಲ್ಲ.

ಆದರೆ ಕಥೆ ಪುಸ್ತಕವನ್ನು ಓದುವುದಾಗಲಿಲ್ಲ ತುಂಗಮ್ಮನಿಗೆ.

ದೊಡ್ಡಮ್ಮ ಕುರ್ಚಿಯಲ್ಲಿ ಕುಳಿತು, ಮೇಜಿನಮೇಲೆ ದಾಖಲೆಯ

ದೊಡ್ಡ ಪುಸ್ತಕವನ್ನು ಬಿಡಿಸುತ್ತಾ, ತುಂಗಮ್ಮನನ್ನು ಬಳಿಗೆ ಕರೆದರು.

"ಮಂಚದ ಮೇಲೆ ಕೂತ್ಕೊ ತುಂಗಾ" ಎಂದರು.

ಆಕೆ ಬಂದು ಕುಳಿತೊಡನೆ ಅವರು ಹೇಳಿದರು.

"ನಿನ್ನ ಹಿಸ್ಟರೀ ಷೀಟು ಬರೆಯೋಣವೇನೆ?"

"ಅಂದರೇನು ದೊಡ್ಡಮ್ಮ?"

'ನಿನ್ನ ಈವರೆಗಿನ ಜೀವನದ ಸೂಕ್ಷ್ಮ ಪರಿಚಯ."

"ಹೂಂ ದೊಡ್ಡಮ್ಮ...."