ಪುಟ:Abhaya.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಪ್ರಕಾಶನದ ಪರವಾಗಿ

ಜನತೆಗೆ ಉತ್ತಮ ದರ್ಜೆಯ ಸಾಹಿತ್ಯವನ್ನು ಕೊಡಬೇಕೆಂಬ ಸಂಕಲ್ಪದಿಂದ, ಕಡಿಮೆ ಬೆಲೆಯ ಹೊತ್ತಗೆಗಳನ್ನು ಹೊರತರಲು ಯೋಚಿಸಿದ ಮೊದಲ ಘಟ್ಟದಲ್ಲಿ,ತ ರಾ ಸು ರವರು ತಮ್ಮ "ಮೊದಲ ನೋಟ"ದಿಂದ ಹರಸಿದರು. ಅದು ನಿಮ್ಮ ಕೈಸೇರಿದ ಕೆಲದಿನಗಳಲ್ಲೇ ಈಗ ನಿಮ್ಮ ಕೈಸೇರುತ್ತಿರುವ ಈ ಕಾದಂಬರಿ, "ಕಡಿಮೆ ಬೆಲೆಯ ಕೈ ಹೊತ್ತಿಗೆಗಳನ್ನು ತರಲಿರುವ ನನ್ನ ಉದ್ಯಮದಲ್ಲಿ ಒಂದು ಕೃತಿಯಿತ್ತು ನೆರವೀಯಬೇಕು" ಎಂದು ನಿರಂಜನರನ್ನು, ಕೇಳಿದಾಗ ಅವರು ಅಭಯಹಸ್ತ ನೀಡಿ ಇತ್ತಿವರು ಕೃತಿ"ಅಭಯ"

ಇದು ನಿಮ್ಮೆಲ್ಲರ ಮೆಚ್ಚುಗೆ ನಡೆಯುತ್ತದೆಂಬುದರ ಬಗ್ಗೆ ನನಗೆ ನಂಬಿಕೆಯಿದೆ. ಕೃತಿಯ ಬಗ್ಗೆ ನಾನು ಹೇಳುವುದಕ್ಕೆಬದಲು, ಓದಿದ ನೀವೇ ಬರೆದು ತಿಳಿಸಬೇಕೆಂದು ಬಯಸುವೆ.

"ಅಭಯ" ಕಾದಂಬರಿ ಹೊರಬರಲು, ಎಲ್ಲರಿಗಿಂತ ಹೆಚ್ಚಿನ ನೆರವಿತ್ತವರು, ಚಿತ್ರ ಪ್ರಿಂಟರಿಯ ಒಡೆಯರಾದ, ಗೆಳೆಯ ಶ್ರೀ ಎಚ್. ವೆಂಕೋಬರಾಯರು ಇವರ ಅಭಯಹಸ್ತವಿಲ್ಲದಿದ್ದರೆ ಪುಸ್ತಕವನ್ನು ಹೊರ ತರುತ್ತಲೇ ಇರಲಿಲ್ಲವೆನ್ನಬಹುದು ಇವರ ಉಪಕಾರಕ್ಕೆ ತುಂಬಾ ಋಣಿ.

"ಮೊದಲ ನೋಟ" ದ ಮುನ್ನುಡಿಯಲ್ಲಿ ತಿಳಿಸಿರುವಂತೆ ಕಡಿಮೆ ಬೆಲೆಯ ಹೊತ್ತಿಗೆಗಳಾಗಿ, ಸಣ್ಣಕತೆಗಳು, ಹರಟೆಗಳು ಇತರ ಸಾಹಿತ್ಯ ಎಲ್ಲವನ್ನೂ ಒದಗಿಸಲು ಯೋಚಿಸಿದೆ ಓದುಗರ ಪ್ರೋತ್ಸಾಹದ ಮೇಲೆ ನಮ್ಮ ಯೋಜನೆ ಅವಲಂಬಿಸಿದೆ ಸಣ್ಣಕತೆಗಳ ಸಂಕಲನವೊಂದನ್ನು ಸದ್ಯದಲ್ಲಿ ಹೊರತರಲಿದ್ದೇನೆಂದು ತಿಳಿಸಲು ಸಂತೋಷಿಸುತ್ತೇನೆ.

ಕಡಿಮೆ ಬೆಲೆಯ ಕೈಹೊತ್ತಗೆಗಳಾಗಿ ಈಗ ಹೆಸರಾಂತ ಸಾಹಿತಿಗಳ ಕೃತಿಗಳೇ ಬರುತ್ತವೆ, ಕಿರಿಯರಿಗೆ ಪ್ರೋತ್ಸಾಹ ದೊರೆತಿಲ್ಲ, ಎಂಬ ದೂರು,