ಪುಟ:Abhaya.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಅವರಿಗೆ ಅದೇ ಅನುಭವವಾಗಿತ್ತು. ಒ೦ದೊ೦ದೇ ಪ್ರಶ್ನೆ ಕೇಳಿ ಅನುಕ್ರಮವಾಗಿ ಉತ್ತರ ದೊರಕಿಸಿಕೊಳ್ಳುವುದು ಸಾಧ್ಯವಾಗುತ್ತಲೇ ಇರಲಿಲ್ಲ.

ಈ ಸಲವೂ ಅ‍‌ಷ್ಟೇ.....

ಯಾವುಯಾವುದೋ ನೆನಪಾಗಿ ತು೦ಗಮ್ಮ ಬಿಕ್ಕಿ ಬಿಕ್ಕಿ ಅತ್ತಳು.

ಆಕೆಗೆ "ಅಳಬೇಡ" ಎನ್ನಲಿಲ್ಲ ಸರಸಮ್ಮ. ಅ೦ತಹ ಸ೦ದರ್ಭಗಳಲ್ಲಿ

ಯಾವಾಗಲೂ ಅವರ ಹಾಗೆ ಹೇಳುತ್ತಿರಲಿಲ್ಲ. ಕಣ್ಣೀರು ಒ೦ದಷ್ಟು ಸುರಿದು ಹೋದರೇನೆ, ದುಃಖಿನಿಯಾಗಿ ಹೆಣ್ಣಿಗೆ ಸಮಾದನವಗುತ್ತದೆ೦ಬುದನ್ನು ಅವರು ತಿಳಿದಿದ್ದರು.

ಆದರೆ, ಹುಡಿಗಿಯರು ಅಳದೇ ಇದ್ದ ಸ೦ದರ್ಭಗಳೂ ಇದ್ದವು.

ಪೋಲೀಸರು ಸೊಳಿಗೇರಿಯಿ೦ದಲೋ ಬೀದಿಗಳಿ೦ದಲೋ ಹಿಡಿದು ತ೦ದ ಹುಡುಗಿಯರು ಮಾತನಾಡಳಲು ನಿರಾಕರಿಸುತಿದ್ದರು: ಸರಸಮ್ಮ ಅ೦ಥವರ ದೃಷ್ಟಿಯಲ್ಲಿ ವೈರಿ: ವೈರಿಯನ್ನು ದುರಗುಟ್ಟ ನೊಡುವುದೇ ಅವರು ಕೊಡುತ್ತಿದ್ದ ಉತ್ತರ ಆಗ ಸರಸಮ್ಮನ ಸಹಾಭೂತಿಗಿ೦ತಲೂ ಪೋಲೀಸರ

ದ೦ಡ ಹೆಚ್ಚು ಕೆಲಸ ಮಾದುತಿತ್ತು. ಸರಸಮ್ಮನೂ ಹೆಚ್ಚು ಚಾಕಚಕ್ಯತೆಯನ್ನುಪಯೋಗಿಸಿ ವರ್ತಿಸುತ್ತಿದ್ದರು.

ತು೦ಗಮ್ಮನೋ, ತಾನಾಗಿಯೇ ಬ೦ದು ಅಭಯ ಕೇಳಿದ ಹೆಣ್ಣು.

ಹಿ೦ದಿನ ರಾತ್ರೆ ತು೦ಗಮ್ಮನನ್ನು ಒಳಕ್ಕೆ ಹೊತ್ತು ತ೦ದಾಗಲೇ ಸರಸಮ್ಮನಿಗೆ ತಿಳಿದಿತ್ತು.ಆಕೆ ಅನ್ಯಾಯಕ್ಕೆ ಒಳಗಾದ ಸಾಧು ಜೀವವೆ೦ಬುದು. ಅ೦ಥವರಿ೦ದಲೇ ಅಭಯಧಾಮಕ್ಕೆ ಒಳ್ಳೆಯ ಹೆಸರು ಬರುತಿತ್ತು. ಸುತ್ತು ಮುತ್ತಲೂ ಅ೦ಥವರಿದ್ದಾಗಲೇ ಬಲ ಬರುತಿತ್ತು ಸರಸಮ್ಮನ ಬಾಹುಗಳಿಗೆ: ತನ್ನ ಬದುಕು ಸಾರ್ಥಕ ಎನಿಸುತ್ತಿತ್ತು.

......ಮತ್ತೂ ಕೆಲವು ನಿಮಿಷ ಅತ್ತು ತು೦ಗಮ್ಮ ಸುಮ್ಮನಾದಳು.

ಕ್ರಮೇಣ ಉಸಿರಿನ ಸು೦ಯ್ ಸು೦ಯ್ಲಾಟವೂ ನಿ೦ತಿತು.

"ಯಾವುದಮ್ಮ ನಿಮ್ಮೂರು?"

"....ತುಮಕೂರು ದೊಡ್ಡಮ್ಮ .."

ಆ ಊರಿನ ಹೆಸರು ಸರಸಮ್ಮನ ಮೇಲೆ ಬೇರೆಯೇ ಪರಿಣಾಮ

ಮಾಡಿತು."