ಪುಟ:Abhaya.pdf/೮೩

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ಅಂತಹ ಒಂದು ಮಾತುಕತೆಯಲ್ಲಿ ಆತನ ವಿಚಾರ ಬಂತು.

"ನಮ್ಮಣ್ಣನ್ನ ನೋಡಿದ್ಯಾ ತುಂಗಮ್ಮಾ?"

"ನಿಮ್ಮಣ್ಣ? ಎಲ್ಲಿ? ಬಂದಿದಾರೇನು?"

"ಆಲ್ನೊಡು ವರನ ಹತ್ತಿರ ಕೂತಿರೋದು".

"ಅವರೇನಾ?"

"ಯಾಕೆ ಹಾಗಂತೀಯ? ಚೆನ್ನಾಗಿಲ್ವೇನು?"

ತುಂಗಮ್ಮನ ಮುಖ ಕೆಂವೇರಿತು.

"ನೀನು ಹೋಗಮ್ಮ. ಹಾಗಂದ್ನೇ ನಾನು?"

"ಹಾಗ್ಬಾ. ತುಂಬಾ ಷೋಕಿಯವನು ನಮ್ಮಣ್ಣ ನೋಡು ನಿನ್ನೇ

ನೋಡ್ತಿದಾನೆ!"

"ಥೂ ಹೋಗೆ!"

"ಓ! ನಾಚ್ಕೆ ಅಷ್ಟರಲ್ಲೇ? ನಮ್ಮಣ್ಣ ನಿನಗೊಳ್ಳೇ ಜೋಡಿ

ತುಂಗಮ್ಮ."

ಸೊಗಸುಗಾರನ ಹಾಗೆಯೇ ಇದ್ದಾಅ ಯುವಕ. ತನ್ನನ್ನು ಆತ

ನೋಡುತ್ತಿದ್ದುದ್ದೂ ನಿಜವಾಗಿತ್ತು. ಆ ಮದುವೆಯ ಚಪ್ಪರದಲ್ಲಿ, ನೆರೆದಿದ್ದ ಜನರೆಡೆಯಲ್ಲಿ, ಮಂಗಳವಾದ್ಯದ ಹಿನ್ನೆಲೆಯಲ್ಲಿ ತುಂಗಮ್ಮನೂ ಆತನನ್ನು ಕದ್ದು ಕದ್ದು ನೋಡಿದಳು. ಆತ ಮುಗುಳ್ನಗುತ್ತಿದ್ದ. ಲಜ್ಜೆ ತಡೆಯಾದರೂ ನೋಡಿದಷ್ಟೂ ನೋಡಬೇಕೆನಿಸುತಿತ್ತು.

ಮದುವೆಯ ಪೂರ್ಣಕಲ್ಪನೆ ತುಂಗಮ್ಮನಿಗೆ ಆಗ ಇರಲಿಲ್ಲ. ಆದರೂ

ಮದುವೆಯ ಯೋಚನೆಯಿಂದ ಆಕೆಗೆ ಸಂತೋಷವಾಗುತಿತ್ತು. ವಧುವಾಗಿ ಸಿಂಗರಿಸಿಕೊಂಡು ಕುಳಿತಿದ್ದ ಅಕ್ಕ ಸುಖಿಯಾಗಿದ್ದುದ್ದನ್ನು ಕಂಡಾಗ, ಆ ಸುಖ ಒಂದು ದಿನ ತನ್ನದೂ ಆಗುವುದೆಂದು ತುಂಗಮ್ಮ ನಂಬಿದ್ದಳು.

ಮೈಸೂರಿನ ಹುಡುಗಿ ಹೇಳಿದ್ದಳು:

"ಬಿ.ಎ.ಲಿ ಓದ್ತಿದಾನೆ ನಮ್ಮಣ್ಣ. ಇನ್ನೆರಡುವರ್ಷ.... ಆಮೇಲೆ

ದೊಡ್ಡ ಕೆಲ್ಸ ಸಿಗತ್ತೆ. ಆಗ ಸಿದ್ದವಾಗಿರ್ಬೇಕಮ್ಮ ನೀನು!"

ಮದುವೆಯ ಆ ವಿಷಯ ಅಷ್ಟರಲ್ಲೇ ಮುಕ್ತಾಯವಾಗಿರಲಿಲ್ಲ.