ಪುಟ:Abhaya.pdf/೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಓ!..."

ಆ ಮಾತು ಮುಂದುವರಿಯಲಿಲ್ಲ.

ಆ ನಾರಾಯಣ ಮೂರ್ತಿಯ ನೆನಪು ಮರೆತು ಹೋಗುವುದು ಸಾಧ್ಯ

ವಿರಲಿಲ್ಲ.ಹಳೆಯ ಘಟನೆಯ ವಿವರ ಈಗ ಹೆಚ್ಚು ವಿಸ್ತಾರವಾದ ಅರ್ಥದೊಡನೆ ಮರುಕಳಿಸಿ ಬರುತಿತ್ತು. ಅಕ್ಕ ಬೆಳಗಾಂವಿಯಲ್ಲೆ ಹೆಣ್ಣು ಮಗು ಹೆತ್ತಳು.

ಮನೆಯನ್ನು ಒಪ್ಪ ಓರಣವಾಗಿಟ್ಟು ತಮ್ಮ-ತಂದೆಯರ ಆರೈಕೆಮಾಡಿ

ಕತೆ ಕಾದಂಬರಿಗಳನ್ನೋದಿ ದಿನ ಕಳೆಯುತಿದ್ದ ತುಂಗಮ್ಮ,ತಾನು ಮುಂದೆ ಗ್ರಹಿಣಿಯಾಗಲಿರುವ ದಿನವನ್ನೆ ಹೆಚ್ಚು ಹೆಚ್ಚಾಗಿ ಚಿತ್ರಿಸಿ ಕೊಂಡಳು.

ತಂದೆ,ಹೊರಗೆ ಎಲ್ಲಾದರೂ ತನ್ನ ವಿವಾಹದ ಪ್ರಸ್ತಾಪ ಮಾಡುವ

ರೇನೋ ಎಂದು ತಿಳಿಯಲು ತುಂಗಮ್ಮ ಕುತೂಹಲ ತಳೆದಳು.ತಮಗೆ ಬರುತ್ತಿದ್ದ ಕಾಗದಗಳನ್ನು ತಂದೆ ಓದಿ ಮಡಚಿ ಇಟ್ಟಮೇಲೆ,ತಾನು ಕದ್ದು ಓದಿದಳು.

ಒಮ್ಮೆ ಒಂದು ಕಾಗದದಲ್ಲಿ ನಾರಾಯಣಮೂರ್ತಿಯ ಪ್ರಸ್ತಾಪವೇ

ಇತ್ತು.

"ಆಗಲಿ ಅವಸರವೇನು,ವಿಚಾರ ಮಡೋಣ,"ಎಂದು ಬರೆದ್ದಿದ್ದರು

ನಾರಾಯಣ ಮೂರ್ತಿಯ ತಂದೆ.

ಆ ಬಳಿಕ,ಅಳಿಯದೇವರಿಂದ ತನ್ನ ತಂದೆಗೆ ಬಂದ ಒಂದು ಕಾಗದ

ದಲ್ಲೂ ಆ ವಿಷಯವಿತ್ತು:

"ಅವನ ತಂದೆ ಜಿಪುಣಾಗ್ರೇಸರ.ಎರಡುಸಾವಿರ ಕೈಗೆ ಬೀಳದೆ

ಇದ್ದರೆ ಅವರು ಒಪ್ಪುವವರೇ ಅಲ್ಲ.

"ಆದರೆ ಕಡುಬಡವರಾದ ತುಂಗಮ್ಮನ ತಂದೆ ಅಷ್ಟು ಹಣದ

ಯೋಚನೆಯನ್ನೇ ಮಾಡುವಂತಿರಲಿಲ್ಲ.

ಆ ವಿಷಯವನ್ನೆತ್ತದೆ,ಅಂತೂ ಮದುವೆಗೆ ಸಂಬಂಧಿಸಿಯೇ,ಅವರು

ಮತ್ತೊಮ್ಮೆ ನಾರಾಯಣಮೂರ್ತಿಯ ತಂದೆಗೆ ಬರೆದಿರಬೇಕು.ಯಾಕೆಂದರೆ ಅವರಿಗೆ ಬಂದ ಮತ್ತೊಂದು ಕಾಗದದಲ್ಲಿ ಹೀಗಿತ್ತು: