ಪುಟ:Abhaya.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

"ಇನ್ನೊಂದು ವರ್ಷ ಚಿರಂಜೀವನ ಮದುವೆಯ ಯೋಚನೆಯನ್ನೇ

ನಾವು ಮಾಡಬಾರದೆಂದಿದ್ದೇವೆ.ಅಲ್ಲ್ಲದೆ,ನಮ್ಮಎರಡು ಕುಟುಂಬಗಳೊಳಗೆ ಸಂಬಂಧವೂ ಸರಿ ಹೋಗಲಾರದು ದಯವಿತಟ್ಟು ಒತ್ತಾಯಿಸಬಾರದು."

...ತುಂಗಮ್ಮನಿಗೆ ಯಾವ ಆಸೆಯೂ ಉಳಿದಿರಲಿಲ್ಲ

ಮನಸಿನಿಂದ ಮರೆಯಾಗಲೇ ಬೇಕಾದ ಪರಿಸ್ಥಿತಿ ಬಂದಾಗ,

ನಾರಾಯಣಮೂರ್ತಿಯ ಚಿತ್ರ ಮೆಲ್ಲಮೆಲ್ಲನೆ ಮಸಕು ಮಸಕಾಯಿತು.

ಆದರೂ ಅದು ಪೂರ್ತಿ ಅಳಿಸಿ ಹೋಗಲಿಲ್ಲ.

ತುಂಗಮ್ಮನ ತಂದೆ ಬೇರೆ ಕಡೆ ವರ ನೋಡುತ್ತಲೇ ಇದ್ದರು;

ಒಂದೆರಡು ಕನ್ಯಾ ಪರೀಕ್ಷೆಗಳೂ ಆದುವು ಇಷ್ಟನ್ನೆಲ್ಲಾ ಯಾವ ಪ್ರತಿಕ್ರಿಯೆಯೂ ಇಲ್ಲದೆ ಜೀವಂತ ಯಂತ್ರದಂತೆ ಸಹಿಸಿಕೊಳ್ಳಲು ತುಂಗಮ್ಮ ಕಲಿತಳು.

ತಂದೆ ಶ್ರೀಮಂತರಾಗಿದ್ದರೆ ತುಂಗಮ್ಮ ಕಾಲೇಜಿಗಾದರೂ ಹೋಗು

ವುದು ಸಾಧ್ಯವಿತ್ತು.ಆಗ,"ಹುಡುಗಿ ಇನ್ನೂ ಓದ್ತಿದಾಳೆ"ಎಂದು ತಂದೆ ಸ್ವಜಾತಿ ಬಾಂಧವರಿಗೆ ಸಮಾಧಾನ ಹೇಳಬಹುದಿತ್ತು.

ಅಂತಹ ಅವಕಾಶ ಅವರಿಗಿರಲಿಲ್ಲ.

ಹುಡುಗಿಗೆ ವಯಸ್ಸಾಯಿತೆಂದು ಬರಬಹುದಾಗಿದ್ದ ಆಕ್ಷೇಪಕ್ಕೇನೂ

ಅವರು ಹೆದರುತ್ತಿರಲಿಲ್ಲ.ಆ ಕಾಲ ಕಳೆದು ಹೋಗಿತ್ತು.ಬದಲು,ಇವತ್ತಲ್ಲ ನಾಳೆ ಆಗಲೇ ಬೇಕಾದ ಮದುವೆಯನ್ನು ಹೇಗೆ ಮಾಡಿ ಮುಗಿಸ ಬೇಕೆಂಬ ಯೋಚನೆಯೇ ಅವರನ್ನು ಹಣ್ಣುಮಾಡಿತು.

ತುಂಗಮ್ಮನನ್ನು ಹೆತ್ತಾಕೆಯನ್ನು ಅವರು ಮದುವೆಯಾದ ದಿನ

ಬೇರೆ;ಈಗಿನದು ಬೇರೆ.ಈ ಇಪ್ಪತೈದು ವರ್ಷಗಳಲ್ಲಿ ಮದುವೆಯ ವಿಚಾರದಲ್ಲೂ ಅದೆಷ್ಟೋ ಬದಲಾವಣೆಗಳು ಆಗಿದ್ದುವು.ಮದುವೆಯ ಮಾರುಕಟ್ಟೆಯಲ್ಲಿ ಗಂಡಿನ ಬೆಲೆ ವಿಪರೀತವಾಗಿ ಏರಿತ್ತು.ಅಳಿಯನಾಗಬೇಕಾಗಿದ್ದವನ ಹಾಗೂ ಅವನ ತಾಯ್ತಂದೆಯರ ಮನವೊಲಿಸಿಕೊಳ್ಳುವುದು ಸಾಮಾನ್ಯ ಕೆಲಸವಾಗಿರಲಿಲ್ಲ.ಅವರ ಬೇಡಿಕೆಗಳನ್ನು ಪೂರೈಸುವುದರೊಳಗೇ ಹೆಣ್ಣು ಹೆತ್ತವರ'ಜನ್ಮಾಂತರದ ಋಣ'ಸಂದಾಯವಾಗುತಿತ್ತು.ಶಹರಗಳಲ್ಲಿ ಹುಡುಗಿ ಇಂಟರ್ ಮೀಡಿಯೆಟ್ ಪಾಸುಮಾಡುವುದಂತೂ...