ಪುಟ:Abhaya.pdf/೯

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

ನಮ್ಮ ಮಾಲೆಯಲ್ಲಿ ಒಂದು ಪ್ರಕಟನೆಯೂ ಹೊರಬರುವುದಕ್ಕಿಂತ ಮುಂಚೆಯೇ ಬಂದಿದೆ. ಹಿರಿಯ ಕಿರಿಯರ ಕೃತಿಗಳನ್ನು ಪ್ರಕಟಿಸುವ ಯೋಜನೆಯನ್ನು ಮೊದಲ ಪ್ರಕಟನೆಯಲ್ಲೇ ತಿಳಿಸಲಾಗಿದೆ ಹಸ್ತಪ್ರತಿ ಕೈಸೇರಿದ ತಕ್ಷಣ ಅದನ್ನು ಪ್ರಕಟಿಸಿಬಿಡಿ ಎಂಬ ಒತ್ತಾಯವೂ ಪ್ರಕಟಿಸುವುದಾದರೆ ಹಸ್ತಪ್ರತಿ ಕಳುಹುತ್ತೇನೆನ್ನುವ ಕಾಗದಗಳೂ ಹಿರಿಯ ಸಾಹಿತಿಗಳ ಕೃತಿಗಿಂತಲೂ ತಮ್ಮ ಕೃತಿ ಮೇಲು ಎಂದು ಹೇಳಿಕೊಳ್ಳುತ್ತಿರುವ ಪತ್ರಗಳೂ ಕಿರಿಯ ಸಾಹಿತಿಗಳಿಂದ ನನಗೆ ಬರುತ್ತಿವೆ. ಕೃತಿ ಉತ್ತಮವಾಗಿದ್ದರೆ ಪ್ರಕಟನೆ ಮಾಡಲು ಯಾರು ತಾನೆ ಹಿಂಜರಿಯುತ್ತಾರೆ'" ಗುಣಕ್ಕೆ ಪಕ್ಷವಾತವುಂಟೆ? ಉತ್ತಮ ಕಥಾವಸ್ತುಗಳಿಂದ ಕೂಡಿದ ಕೃತಿಗಳಿಗೆ ಸರ್ವಥಾ ಸ್ವಾಗತವಿದೆ. ಉತ್ತಮ ದರ್ಜೆಯ ಸಾಹಿತ್ಯವನ್ನು ಕೊಡುವುದೇ ನಮ್ಮ ಮುಖ್ಯಗುರಿ.

ಈ ಪ್ರಕಟನೆಗೆ ಮುಖಚಿತ್ರ ಬರೆದುಕೊಟ್ಟ ಶ್ರೀ ರಮೆಶ್ ರಿಗೆ, ಪುಸ್ತಕವನ್ನು ಮುದ್ರಿಸಿಕೊಟ್ಟ ವಿಶ್ವವಾಣಿ ಮುದ್ರಣಾಲಯದ ವ್ಯವಸ್ತಾಪಕರಾದ ಶ್ರೀ ಕ. ಬಾ. ಮಾಧೂರಾಯರಿಗೆ, ಮುದ್ರಣಕಾರ್ಯದಲ್ಲಿ ನೆರವಾದ ಶ್ರೀ ಎಸ್. ಕೆ. ನಾಡಿಗ್ ಅವರಿಗೆ ನನ್ನ ಹೃತ್ಪೂರ್ಣ ನೆನಕೆಗಳು.

ತಿಪಟೂರು
ಯುಗಾದಿ, "ಜಯ."
ತಾ. ರಾ. ನಾಗರಾಜ