ಪುಟ:Abhaya.pdf/೯೭

ವಿಕಿಸೋರ್ಸ್ದಿಂದ
Jump to navigation Jump to search
ಈ ಪುಟವನ್ನು ಪ್ರಕಟಿಸಲಾಗಿದೆ

ದಿನಗಳಲ್ಲಿ ಇದೇ ಮೊದಲು ಬಾರಿ ಆತ ತನ್ನನ್ನು ಏಕವಚನದಲ್ಲಿ ಸಂಬೋಧಿಸಿದ್ದ. ಸಂತೋಷದಿಂದಲೂ ಲಜ್ಜೆಯಿಂದಲೂ ಆಕೆಯ ಕತ್ತು ಬಾಗಿತು.

"ಏನು ವಿಶೇಷ?"

"ಪದ್ದಕ್ಕನಿಗೆ ಐದು ತಿಂಗಳಂತೆ?"

"ಓ! ಪರವಾಗಿಲ್ವೆ ಪ್ರೊಫಸರು?...ಅಕ್ಕ ಬರ್ತಾರಂತೇನು?"

ಆ ಅಕ್ಕ ಬಂದರೆ ಅಲ್ಲಿ ತನ್ನ ಏಕಾಂತಕ್ಕೆ ಭಂಗ ಬರುವುದೋ ಏನೋ

ಎಂಬ ಭೀತಿಯ ಛಾಯೆಯೂ ಇದ್ದಿರಬೇಕು ಆ ಸ್ವರದಲ್ಲಿ!

"ಯಾಕ್ಬರ್ತಾಳೆ? ಇಲ್ಲಿಯಾವ ಅನುಕೂಲ ಇದೇಂತೆ? ಚೊಚ್ಚಲ

ಬಾಣನ್ತನಕ್ಕೇ ಬರಲಿಲ್ಲ...ಗೊತ್ತೇ ಇದೆಯಲ್ಲ ನಮ್ಮನೇ ಸಮಾಚಾರ."

ಇನ್ನೇನು ಬರೆದಿದಾರೆ ಕಾಗದದಲ್ಲಿ?"'

ಆ ಕಾಗದದಲ್ಲಿ ನಾರಾಯಣಮೂರ್ತಿಯ ವಿಷಯವೂ ಇತ್ತು.'ಆತ

ನಮ್ಮಮನೆಗೆ ಆಗಾಗ್ಗೆ ಬರ್ತಾರೆ' ಎಂದು ತಂಗಿ ಬರೆದುದಕ್ಕೆ 'ಆತನಿಗೆ ಮದುವೆಯಾಯ್ತೆ?' ಎಂದು ಅಕ್ಕ ಕೇಳಿದ್ದಳು. ಆ ವಾಕ್ಯದ ನೆನಪಾಗುತ್ತಲೇ ತುಂಗಮ್ಮ ಕೆಂಪು ಕೆಂಪಾದಳು.

"ಯಾಕೆ, ಬೇರೇನೂ ಬರೆದಿಲ್ವೇನು?"

ಆ ಕಾಗದ ಕೊರಡಿಯೊಳಗಿತ್ತು ಆದನ್ನು ತಂದು "ಓದಿನೋಡಿಕೋ"

ಎಂದು ಕೊಡಬಹುದಲ್ಲವೆ? ಅದನ್ನು ತರಲು ತಾನು ಕೊಠಡಿಗೆ ಹೋದಾಗ...

"ತಾಳಿ, ಒಳೆಗಿದೆ ತರ್ತೀನಿ."

ತುಂಗಮ್ಮ ಒಳಹೋಗಿ ಕಾಗದವನ್ನೆತ್ತಿಕೊಂಡಳು. ಎಣಿಕೆ ತಪ್ಪಾಗಿರ

ಲಿಲ್ಲ...ಹಿಂಬಾಲಿಸಿ ಬಂದ ಕಳ್ಳ ಹೆಜ್ಜೆಯ ಸಪ್ಪಳ...ಮೂರು ವರ್ಷಗಳ ಹಿಂದೆ ನಡೆದಿದ್ದ ಘಟನೆಯ ಪುನರಾವೃತ್ತಿ...

ಈ ಸಲ, ತನಗೇನೂ ತಿಳಿಯದು ಎಂಬಂತೆ ತುಂಗಮ್ಮ ಕಣ್ಣು ಮುಚ್ಚಿ

ಮೈಮರೆತಳು ತುಟಿಗೆ ಎಂಜಲಾಯಿತೆಂದು ಆಕೆಗೆ ತೋರಲಿಲ್ಲ. ಅವನೂ ಗಾಬರಿಯಾಗಿ ಓಡಿ ಹೋಗುವ ಅವಸರದಲ್ಲಿರಲಿಲ್ಲ.

ಬಂಧನವನ್ನು ಸಡಿಲಗೊಳಿಸುತ್ತಾ ನಾರಾಯಣಮೂರ್ತಿ ನಕ್ಕು

ಹೇಳಿದ: