ಪುಟ:Abhaya.pdf/೯೮

ವಿಕಿಸೋರ್ಸ್ದಿಂದ
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ಈ ಪುಟವನ್ನು ಪ್ರಕಟಿಸಲಾಗಿದೆ

"ಹಲ್ಲು ಮುರಿದು... ಕೈಗೆ-"

"ಥೂ !"

ಆದರೆ ಈ 'ಥೂ' ಕಾರದಲ್ಲಿ ಉವೇಕ್ಷೆ ಇರಲಿಲ್ಲ, ಆದರಲ್ಲಿ 'ನನ್ನ

ಜೀವವೆ ' ಎನ್ನುವ ಸ್ವರದ ವಿಕೃತ ಪ್ರತಿಧ್ವನಿ ಇತ್ತು.

ಮುಗಿಲು ತುಂಗಮ್ಮನ ಕೈಗೆ ಎಟಕುತಿದ್ದರೂ ಈ ಪ್ರಪಂಚವನ್ನಾಕೆ

ಮರೆತಿರಲಿಲ್ಲ.

"ಅಪ್ಪ ಬರೋ ಹೊತ್ತಾಯ್ತು."

"ನಡೀ ಹೊರಗೆ-ಅನ್ನೋದರ ಬದಲು ಈ ಪ್ರಯೋಗವೇನೋ?"

"ಧೂ ನೀನೆ !"

ನಾರಾಯಣಮೂರ್ತಿ ಹೊರಬಂದು ಕುಳಿತ. ತಮ್ಮಿಬ್ಬರ ನಡುವೆ

ಮುದ್ದೆಯಾಗಿ ಮಾನ ಕಳೆದುಕೊಂಡಿದ್ದ ಕಾಗದವನ್ನು ತುಂಗಮ್ಮ ಆತನಿಗೆ ಓದಲು ಕೊಟ್ಟಳು ತನ್ನನ್ನು ಕುರಿತು ಕೇಳಿದ್ದ ಪ್ರಶ್ನೆಯನ್ನೋದಿ ನಾರಾಯಣಮೂರ್ತಿ ನಕ್ಕು ಬಿಟ್ಟ.

"ಹೂಂ.ಏನೂಂತ ಉತ್ತರ ಬರೆದ ?"

"ಬರೆದೇ ಇಲ್ಲ ಏನ್ಬರೀಲಿ ?"

"ಆಗಿದೇಂತ !"

ತುಂಗಮ್ಮನಿಗೆ ಗಾಬರಿಯಾಯಿತು

"ಏನು ?"

"ಹೇಳಿದ್ನಲ್ಲಾ.ಆಗಿದೇಂತ....ನಾರಾಯಣಮೂರ್ತಿ ಎಂಬ ವರ

ನಿಗೂ ತುಂಗಮ್ಮನೆಂಬ ವಧುವಿಗೂ ಈದಿನ ಶುಭಮುಹೂರ್ತದಲ್ಲಿ-"

"ಥೂ....ಹೋಗೀಂದ್ರೆ ನೀವು !"

ಕಾಫಿ ಮಾಡಲೆಂದು ತುಂಗಮ್ಮನೆದ್ದು ಒಳ ಹೋದಳು

ಹೊರಗೆ,ಶಾಲೆ ಮುಗಿಸಿಕೊಂಡು ಬಂದ ತುಂಗಮ್ಮನ ತಮ್ಮನೊಡನೆ

ನಾರಾಯಣಮುರ್ತಿ ಹರಟೆ ಹೊಡೆದ...

ತುಂಗಮ್ಮ ತಂದೆ ಸೂ ವಾಗಿ ಈ ಎಳೆಯರನ್ನು ಪರೀಕ್ಷೆಸು

ತಿದ್ದರು.ಆದರೆ ಅವರಿಗೇನೂ ತಿಳಿಯುತಿರಲ್ಲಿಲ್ಲ ತೋಚುತ್ತಿರಲಿಲ್ಲ.

ನಾರಾಯಣಮುರ್ತಿ ಮತ್ತು ತುಂಗಮ್ಮ ಆಗಾಗ್ಗೆ ಸಂದರ್ಭಸಾಧಿಸಿ.